BIG NEWS : ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ : ದಸರಾ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ವಿಶೇಷ ರೈಲು ಸಂಚಾರ.!

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ . ಹೆಚ್ಚುವರಿ ದಟ್ಟಣೆ ನಿವಾರಿಸಲು ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ನೈಋತ್ಯ ರೈಲ್ವೆಯು ನಗರದಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳ ಸೇವೆ ನೀಡಲಿದೆ.

ಯಶವಂತಪುರ ವಿಜಯಪುರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್
ಯಶವಂತಪುರ – ವಿಜಯಪುರ ಎಕ್ಸ್ಪ್ರೆಸ್ ಸ್ಪೆಷಲ್ ರೈಲು (06277) ಸೆ. 30 ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ವಿಜಯಪುರ ತಲುಪಲಿದೆ. ವಾಪಸು ಈ ರೈಲು (06278) ಅ. 1ರಂದು ಸಂಜೆ 5.30ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 6:40ಕ್ಕೆ ಎಸ್ ಎಂವಿಟಿ ಬೆಂಗಳೂರು ತಲುಪಲಿದೆ.

ಯಶವಂತಪುರ-ವಿಜಯಪುರ-ಎಸ್ಎಂವಿ ಟಿ ಬೆಂಗಳೂರು ಎಕ್ಸ್ಪ್ರೆಸ್
ಯಶವಂತಪುರ -ವಿಜಯಪುರ ಎಕ್ಸ್ಪ್ರೆಸ್ ಸ್ಪೆಷಲ್ ರೈಲು (06279) ಅ. 2 ರಂದು ಸಂಜೆ 7.40ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 7.45ಕ್ಕೆ ವಿಜಯಪುರ ತಲುಪಲಿದೆ.

ಬೆಂಗಳೂರು ಎಕ್ಸ್ಪ್ರೆಸ್ ಸ್ಪೆಷಲ್ ರೈಲು
ಅ. 3 ರಂದು ಸಂಜೆ 5.30ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ8.0ಕ್ಕೆ ಎಸ್ಎಂವಿಟಿ ತಲುಪಲಿದೆ. ಈ ರೈಲುಗಳು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿ ಬೆನ್ನೂರು, ಎಸ್ಎಂಎಂ ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣ ಗಳಲ್ಲಿ ನಿಲುಗಡೆ ಹೊಂದಿರಲಿವೆ. ರೈಲುಗಳು ಒಂದು ಪ್ರಥಮ ದರ್ಜೆ ಕಮ್ ಸೆಕೆಂಡ್ ಎಸಿ ಕೋಚ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿ ಒಳಗೊಂಡಂತೆ ಒಟ್ಟು 21 ಬೋಗಿ ಹೊಂದಿರುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read