ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಜಾರಿಯಲ್ಲಿದ್ದ ಟಿಕೆಟ್ ದರದ ರೌಂಡಪ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.
ಚಿಲ್ಲರೆ ಸಮಸ್ಯೆಯಿಂದಾಗಿ 2016 ರಿಂದ ಪ್ರಯಾಣದರವನ್ನು ರೌಂಡಪ್ ಮಾಡಿ ಹಣ ಸಂಗ್ರಹಿಸಲಾಗುತ್ತಿತ್ತು. ಈಗ ಟಿಕೆಟ್ ಕಾಯ್ದಿರಿಸುವ ಕೌಂಟರ್ ಗಳಲ್ಲಿನ ಪಿಒಎಸ್ ಯಂತ್ರಗಳು ಮತ್ತು ಇಟಿಎಂ ಯಂತ್ರಗಳಲ್ಲಿ ಯುಪಿಐ ವ್ಯವಸ್ಥೆ ಒದಗಿಸಲಾಗಿದೆ. ಇದರಿಂದ ಪ್ರಯಾಣ ದರವನ್ನು ರೌಂಡಪ್ ಮಾಡಿ ಸಂಗ್ರಹಿಸುವುದನ್ನು ರದ್ದು ಮಾಡಲಾಗಿದೆ.
ಈ ಮೊದಲು ಪ್ರಯಾಣದರ 101 ರೂ.ನಿಂದ 105 ರೂ.ವರೆಗೆ ಇದ್ದಲ್ಲಿ 100 ರೂಪಾಯಿ ಹಾಗೂ 106 ರಿಂದ 109 ರೂಪಾಯಿ ಇದ್ದಲ್ಲಿ 110 ರೂ. ಪಡೆಯಲಾಗುತ್ತಿತ್ತು. ಇನ್ನು ಮುಂದೆ ನಿಗದಿತ ನಿಖರ ಟಿಕೆಟ್ ದರವನ್ನೇ ಪಡೆಯಲಾಗುವುದು. ಕೆಎಸ್ಆರ್ಟಿಸಿಯ ಪ್ರತಿಷ್ಠಿತ 400 ಬಸ್ ಗಳಲ್ಲಿ ಜಾರಿಯಲ್ಲಿದ್ದ ಟಿಕೆಟ್ ರೌಂಡಪ್ ರದ್ದು ಮಾಡಲಾಗಿದೆ.