ವಾಹನ ಸವಾರರಿಗೆ ಗುಡ್ ನ್ಯೂಸ್: ಫಾಸ್ಟ್ಯಾಗ್ ಖಾತೆಯಿಂದ ತಪ್ಪಾಗಿ ಹಣ ಕಡಿತಗೊಂಡರೆ ವಾಪಸ್

ವಾಹನ ಸವಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಫಾಸ್ಟ್ಟ್ಯಾಗ್ ಖಾತೆಯಿಂದ ತಪ್ಪಾಗಿ ಹಣ ಕಡಿತಗೊಂಡರೆ ವಾಪಸ್ ನೀಡಲಾಗುವುದು.

ಹೌದು, ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚರಿಸದಿದ್ದರೂ ಟೋಲ್ ಶುಲ್ಕ ಕಡಿತವಾದ ಪ್ರಕರಣಗಳು ವರದಿಯಾಗುತ್ತಿವೆ. ಮಾಹಿತಿ ಕೊರತೆಯಿಂದ ವಾಹನಗಳ ಮಾಲೀಕರು ಅಧಿಕೃತ ದೂರು ದಾಖಲಿಸುವುದಿಲ್ಲ. ತಪ್ಪಾಗಿ ಟೋಲ್ ಹಣ ಕಡಿತವಾದ ಸಂದರ್ಭದಲ್ಲಿ ಫಾಸ್ಟ್ ಟ್ಯಾಗ್ ಬಳಕೆದಾರರು ಫಾಸ್ಟ್ಟ್ಯಾಗ್ ನೀಡುವ ಬ್ಯಾಂಕ್, ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ 1033, falsededuction@ihmcl.com ಇ-ಮೇಲ್ ಗೆ ದೂರು ನೀಡಬಹುದು.

ಹೀಗೆ ದಾಖಲಾದ ಪ್ರಕರಣಗಳನ್ನು ಬ್ಯಾಂಕುಗಳು, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್ ಕೂಲಂಕಷವಾಗಿ ಪರಿಶೀಲನೆಸಿ ಶುಲ್ಕವನ್ನು ಚಾರ್ಜ್ ಬ್ಯಾಕ್ ಮಾಡಲು ಕ್ರಮ ಕೈಗೊಳ್ಳಲಿವೆ.

ವಾಹನ ಟೋಲ್ ಪ್ಲಾಜಾ ದಾಟದಿದ್ದರೂ ಕೂಡ ಖಾತೆಯಿಂದ ಹಣ ಕಡಿತ, ವಾಹನ ಪಾರ್ಕಿಂಗ್ ನಲ್ಲೇ ನಿಂತಿದ್ದರೂ ಹಣ ಕಡಿತವಾದ ಸಂದೇಶ ಮೊಬೈಲ್ ಗೆ ರವಾನೆ, ಒಂದೇ ಸಮಯದಲ್ಲಿ 3-4 ಬಾರಿ ಹಣ ಕಡಿತ ಹೀಗೆ ಅನೇಕ ತೊಂದರೆಯ ಬಗ್ಗೆ ಬಳಕೆದಾರರು ದೂರಿದ್ದಾರೆ. ಈ ಬಗ್ಗೆ ಮಾಹಿತಿ ಕೊರತೆಯಿಂದ ಬಳಕೆದಾರರು ದೂರು ನೀಡುವುದಿಲ್ಲ. ದೂರು ನೀಡಿದವರಿಗೆ ಪರಿಶೀಲನೆ ನಡೆಸಿ ಶುಲ್ಕವನ್ನು ಚಾರ್ಜ್ ಬ್ಯಾಕ್ ಮಾಡಲಾಗುವುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read