ವೈದ್ಯಕೀಯ ಕೋರ್ಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಮತ್ತೆ 200 ಹೆಚ್ಚುವರಿ ಸೀಟು ಲಭ್ಯ

ಬೆಂಗಳೂರು: 3ನೇ ಸುತ್ತಿನ ಸೀಟು ಹಂಚಿಕೆಗೆ ಹೆಚ್ಚುವರಿಯಾಗಿ ಇನ್ನೂ 200 ಸೀಟು ಲಭ್ಯವಾಗಿದ್ದು, ಸೀಟು ಸಿಗದವರು ಈ ಸೀಟುಗಳಿಗೂ ವೈದ್ಯಕೀಯ ಕೋರ್ಸ್ ಶುಲ್ಕ ಕಟ್ಟಿ ಆಪ್ಷನ್ಸ್ ದಾಖಲಿಸಲು ಅ.18ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಚಲನ್ ಡೌನ್‌ಲೋಡ್ ಮಾಡಿಕೊಂಡು ಸಂಜೆ 4ಗಂಟೆ ಒಳಗೆ ಕೋರ್ಸ್ ಶುಲ್ಕ ಕಟ್ಟಬೇಕು. ಆಪ್ಷನ್ಸ್ ದಾಖಲಿಸಲು ಸಂಜೆ 5 ಗಂಟೆವರೆಗೆ ಅವಕಾಶ ಇರುತ್ತದೆ.

ಬೆಂಗಳೂರಿನ ಎಂವಿಜೆ, ಕಲ್ಬುರ್ಗಿಯ ಮಹಾದೇವಪ್ಪ ರಾಂಪುರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆ.ವೆಂಕಟರಮಣಗೌಡ ಹಾಗೂ ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜುಗಳಿಗೆ ಹೆಚ್ಚುವರಿಯಾಗಿ ತಲಾ 50 ಸೀಟುಗಳನ್ನು MCC ಮಂಜೂರು ಮಾಡಿದೆ.

ಇದುವರೆಗೂ ಇವು ಸೇರಿದಂತೆ ಒಟ್ಟು ಒಂಬತ್ತು ಕಾಲೇಜುಗಳ ಒಟ್ಟು 450 ಸೀಟುಗಳು 3ನೇ ಸುತ್ತಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾದಂತಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read