ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ(BOB) ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 0.4 ರಷ್ಟು ಇಳಿಕೆ ಮಾಡಿದೆ.
ಬಿಒಬಿಯಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ದರ ಶೇಕಡ 8.40 ರಿಂದ ಶೇಕಡ 8ಕ್ಕೆ ಇಳಿಕೆಯಾಗಿದೆ. ಹೊಸ ಮನೆಗಳಿಗೆ ಸಾಲ ಮತ್ತು ಗೃಹ ನವೀಕರಣ ಸಾಲಗಳಿಗೆ ಈ ಬಡ್ಡಿದರ ಅನ್ವಯವಾಗಲಿದೆ. ಆದರೆ ಸಾಲದ ಮೊತ್ತ 15 ಲಕ್ಷ ರೂ. ಮೇಲ್ಪಟ್ಟು ಇರಬೇಕು. ಅಲ್ಲದೇ, ಹೆಚ್ಚುವರಿಯಾಗಿ 40 ವರ್ಷದೊಳಗಿನ ವಯಸ್ಸಿನ ಯುವ ಜನರಿಗೆ 10 ಮೂಲಾಂಶಗಳಷ್ಟು ಬಡ್ಡಿ ದರ ಕಡಿಮೆ ಮಾಡಲಾಗುವುದು.
ಮಹಿಳೆಯರಿಗೆ 5 ಮೂಲಾಂಶಗಳಷ್ಟು ಬಡ್ಡಿ ದರ ಕಡಿಮೆ ಮಾಡಲಾಗುವುದು. ಸಿಬಿಲ್ ನಲ್ಲಿ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಲ್ಲಿ ಈ ಪರಿಸ್ಕೃತ ಬಡ್ಡಿದರ ಅನ್ವಯವಾಗುವುದಿಲ್ಲ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.