ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಈ ಸಂಬಂಧ ಈಗಾಗಲೇ ಉಲ್ಲೇಖ-(3) ರಂತೆ ಹೊರಡಿಸಲಾಗಿರುವ ಪ್ರಕಟಣೆಯಲ್ಲಿ ಆಯ್ಕೆ ಪ್ರಕ್ರಿಯೆಯ ವೇಳಾಪಟ್ಟಿಯನ್ನು ದಿನಾಂಕ:04.05.2025 ರಂದು ನಡೆಯಲಿರುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಪರಿಷ್ಕರಿಸಲಾಗಿದೆ.
ಕೌನ್ಸಿಲಿಂಗ್ ಪಕ್ರಿಯೆ ಪರಿಷ್ಕೃತ ವೇಳಾಪಟ್ಟಿ:
ಕಾಲೇಜುಗಳ ಪ್ರಾಂಶುಪಾಲರು ಪ್ರಸ್ತುತ ಲಭ್ಯವಿರುವ ಕಾರ್ಯಭಾರದ 1. ವಿವರವನ್ನು ಇ.ಐ.ಎಂ.ಎಸ್. ನಲ್ಲಿ ಕಡ್ಡಾಯವಾಗಿ upload ಮಾಡಲು ಕೊನೆಯ ದಿನಾಂಕ; 29.04.2025(ಸಂಜೆ 5:30 ರೊಳಗೆ)
ತಾತ್ಕಾಲಿಕ ಮೆರಿಟ್ ಪಟ್ಟಿ ಹಾಗೂ ತಾತ್ಕಾಲಿಕ ಕಾರ್ಯಭಾರ ಪ್ರಕಟಿಸುವ ದಿನಾಂಕ: 03.05.2025
ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸಿಲಿಂಗ್ ಪ್ರಕ್ರಿಯೆ ದಿನಾಂಕ 05.05.2025
ಉಳಿದಂತೆ, ಉಲ್ಲೇಖಿತ-(3) ರ ಪ್ರಕಟಣೆಯಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
