ರಾಜ್ಯ ಸರ್ಕಾರದಿಂದ ʻಅತಿಥಿ ಉಪನ್ಯಾಸಕರಿಗೆʼ ಗುಡ್ ನ್ಯೂಸ್ : ಈ ವರ್ಷದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು!

ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗೌರವಧನ ಹೆಚ್ಚಳದ ಜೊತೆಗೆ ಹಲವು ಸೌಲಭ್ಯಗಳನ್ನು ಜಾರಿಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಗೃಹ ಕಚೇರಿಯಲ್ಲಿ  ಮಾಜಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ ರವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದೊಂದಿಗೆ  ಸಭೆ ನಡೆಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳಾನುಸಾರವಾಗಿ ಯಾವುದೇ ಕಾನೂನು ತೊಡಕಾಗದಂತೆ ಗೌರವಧನವನ್ನೂ ಸೇವಾ ಅವಧಿ ಆಧಾರದಲ್ಲಿ ಹೆಚ್ಚಿಸುವ ಜೊತೆಗೆ, ಐದು ಲಕ್ಷ ರೂಗಳ ಆರೋಗ್ಯ ವಿಮೆ,ಸೇವೆಯಿಂದ ನಿವೃತ್ತಿಯಾದಾಗ ಭದ್ರತಾ ರೂಪದಲ್ಲಿ 5 ಲಕ್ಷ , ಒಂದು ದಿನ ವೇತನ ಸಹಿತ ರಜೆ ಸೇರಿದಂತೆ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ಜಾರಿಗೊಳಿಸಿದ್ದು ಅತಿಥಿ ಉಪನ್ಯಾಸಕರ ಪರ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಸಿಗಲಿರುವ ಸೌಲಭ್ಯಗಳು

  • ಸೇವಾನುಭವದ ಆಧಾರದ ಮೇಲೆ ಗೌರವ ಧನ ಹೆಚ್ಚಳ
  • 1 ರಿಂದ 5 ವರ್ಷ- 5,000/-
  • 5 ರಿಂದ 10 ವರ್ಷ- 6,000/-
  • 10 ರಿಂದ 15 – 7,000/-
  • 15 ವರ್ಷಕ್ಕಿಂತ ಹೆಚ್ಚು- 8,000/-
  • ವಾರ್ಷಿಕ 5 ಲಕ್ಷ ರೂ ಗಳ ಆರೋಗ್ಯ ವಿಮಾ ಸೌಲಭ್ಯ
  • 60 ವರ್ಷ ಮೀರಿದ ನಂತರ 5 ಲಕ್ಷ ಇಡಿಗಂಟು
  • ವೇತನ ಸಹಿತ ಮಾಸಿಕ 1 ದಿನ ರಜೆ
  • ವೇತನ ಸಹಿತ 3 ತಿಂಗಳ ಮಾತೃತ್ವ ರಜೆ
  • ನೇಮಕಾತಿ ಸಂದರ್ಭದಲ್ಲಿ ಸೇವಾನುಭವ ಆಧರಿಸಿ ಕೃಪಾಂಕ
  • ಸೇವೆ ಮುಂದುವರಿಕೆ ಮತ್ತು ಕೌನ್ಸಲಿಂಗ್ ಸರಳೀಕರಣ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read