ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ಭರ್ಜರಿ ಗುಡ್ ನ್ಯೂಸ್ : 11,543 ನೌಕರರ ನೇಮಕಾತಿಗೆ ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು:  ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ ಕರ್ವತವ್ಯ ನಿರ್ವಹಿಸುತ್ತಿರುವ ಗ್ರಾಮಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 11,543 ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಿಗಿಸಲು ಮುಂದಾಗಿದೆ.

ಸದಾ ಅಭದ್ರತೆಯಲ್ಲೇ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯಿತಿಗಳ ನೌಕರರ ನೇಮಕಾತಿಗೆ ಅನುಮೋದನೆ ನೀಡಿ ಐತಿಹಾಸಿಕ  ನಿರ್ಧಾರ ರಾಜ್ಯ ಸರ್ಕಾರ  ಕೈಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಸೇವಾ ಭದ್ರತೆಯನ್ನು ಒದಗಿಸುವ ಈ ನಿರ್ಧಾರದಿಂದ 11, 543 ನೌಕರರಿಗೆ ಜೀವನ ಭದ್ರತೆ ಸಿಕ್ಕಂತಾಗಿದೆ.

2017ಕ್ಕೆ  ಮುಂಚಿತವಾಗಿ ನೇಮಕಗೊಂಡು ಗ್ರಾಮಪಂಚಾಯಿತಿಗಳಲ್ಲಿ ಜವಾನ, ನೀರಗಂಟಿ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಲಾಗುತ್ತದೆ. ಇದರಿಂದಾಗಿ 11,543 ಸಿಬ್ಬಂದಿಗೆ ಸೇವಾ ಭದ್ರತೆಯ ಭವಾನೆ ಬಲವರ್ಧನೆಗೊಳ್ಳಲಿದೆ.

2017  ಕ್ಕೂ ಮೊದಲು ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ 18,672 ಸಿಬ್ಬಂದಿ ನೇಮಕಗೊಂಡು ನಾನಾ ಕಾರಣಗಳಿಗಾಗಿ ಅನುಮೋದನೆ ಸಿಕ್ಕಿರಲಿಲ್ಲ. ಈ ಪೈಕಿ 11, 543 ಸಿಬ್ಬಂದಿ ಕನಿಷ್ಟ ವಿದ್ಯಾರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಲಾಗಿತ್ತು. ಹೀಗಾಗಿ ಇದೀಗ ಸರ್ಕಾರವ ಈ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ಒದಗಿಸಲು ಮುಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read