ನವದೆಹಲಿ: 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಆಯ್ಕೆ ಮಾಡಿಕೊಂಡ ಕೇಂದ್ರ ಸರ್ಕಾರ ನೌಕರರು ವಿ.ಆರ್.ಎಸ್.ನಲ್ಲಿ ಖಚಿತ ಪಾವತಿಗೆ ಅರ್ಹರಾಗಿರುತ್ತಾರೆ.
ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿರುವ ನಿಯಮಗಳ ಅಡಿಯಲ್ಲಿ ಪ್ರೊ ರೇಟಾ ಆಧಾರದಲ್ಲಿ ಸರ್ಕಾರಿ ನೌಕರರು ಖಚಿತ ಪಾವತಿಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಸೆಪ್ಟೆಂಬರ್ 2ರಂದು ಅಧಿಕೃತ ಗೆಜೆಟ್ ಹೊರಡಿಸಿದ್ದು, ಏಕೀಕೃತ ಪಿಂಚಣಿ ಯೋಜನೆ ಪಾವತಿ 25 ವರ್ಷಗಳ ಅರ್ಹತಾ ಸೇವೆ ಪೂರ್ಣಗೊಳಿಸಿದ ಬಳಿಕವಷ್ಟೇ ಸಿಗುತ್ತದೆ. ಆದರೂ 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಪೂರ್ಣಗೊಳಿಸಿದ ಸರಕಾರಿ ನೌಕರರು ವಿ.ಆರ್.ಎಸ್. ಪಡೆದುಕೊಂಡಲ್ಲಿ ಪ್ರೊ ರೇಟಾ ಆಧಾರದಲ್ಲಿ ಅರ್ಹತಾ ಸೇವೆಯ ವರ್ಷವನ್ನು ಖಚಿತ ಪಾವತಿಯನ್ನು 25 ರಿಂದ ಭಾಗಿಸಿ ಸಿಬ್ಬಂದಿಗೆ ನೀಡಲಾಗುವುದು.
ಇದರೊಂದಿಗೆ ವೈಯಕ್ತಿಕ ಕಾರ್ಪಸ್ ನಲ್ಲಿ ಶೇಕಡ 60ರಷ್ಟು ಮೊತ್ತ ಹಿಂಪಡೆಯುವುದಕ್ಕೆ ಪ್ರತಿ ಆರು ತಿಂಗಳ ಸೇವಾ ಅವಧಿಗೆ ಮೂಲವೇತನ ಮತ್ತು ತುಟ್ಟಿ ಭತ್ಯೆಯ 1/10 ಒಟ್ಟು ಮೊತ್ತದ ಲಾಭ ನಿವೃತ್ತಿ ಗ್ರಾಚುಟಿ ರಜೆ ನಗದೀಕರಣ ಸೇರಿ ಅನೇಕ ಪ್ರಯೋಜನಗಳನ್ನು ನಿವೃತ್ತಿ ವೇಳೆ ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ.