2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡುವ ಸಲುವಾಗಿ ಕೊಪ್ಪಳ ಜಿಲ್ಲೆಯಲ್ಲಿ 3 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
2025-26ನೇ ಸಾಲಿನಲ್ಲಿ ಭತ್ತದ ಬೆಂಬಲ ಬೆಲೆ ಘೋಷಿಸಿದ್ದು, ಭತ್ತ ಸಾಮಾನ್ಯ ರೂ.2369, ಭತ್ತ ಗ್ರೇಡ್-ಎ ರೂ.2389/- ದರ ನಿಗದಿಪಡಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿದ್ದು, ಭತ್ತ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅಕ್ಟೋಬರ್ 31 ರವರೆಗೆ ರೈತರ ನೋಂದಣಿ ಕಾರ್ಯ ಕೈಗೊಳ್ಳಲಾಗುವುದು. ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂ. ನಂತೆ ಗರಿಷ್ಠ 50 ಕ್ವಿಂ. ಭತ್ತವನ್ನು ಖರೀದಿಸಲಾಗುವುದು.
ಗಂಗಾವತಿಯ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ (ಟಿಎಪಿಸಿಎಂಎಸ್) ಕಟ್ಟಡ, ಎಪಿಎಂಸಿ ಗಂಜ್ ಖರೀದಿ ಕೇಂದ್ರದಲ್ಲಿ ಖರೀದಿ ಅಧಿಕಾರಿಯನ್ನಾಗಿ ಕೆ.ಎಫ್.ಸಿ.ಎಸ್.ಸಿ ಯ ಮಳಿಗೆ ವ್ಯವಸ್ಥಾಪಕ ಶೇಖರಪ್ಪ ಎನ್. ಮೊ.ಸಂ: 8861657588, ಕಾರಟಗಿಯ ತಹಶೀಲ್ದಾರ ಕಚೇರಿ, ಎಪಿಎಂಸಿ ಗಂಜ್ ಖರೀದಿ ಕೇಂದ್ರದಲ್ಲಿ ಖರೀದಿ ಅಧಿಕಾರಿಯನ್ನಾಗಿ ಆಹಾರ ನಿರೀಕ್ಷಕ ನವೀನ ಮಠದ ಮೊ.ಸಂ. 8123453419, ಕೊಪ್ಪಳ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಮಳಿಗೆ ವ್ಯವಸ್ಥಾಪಕ ಮೃತ್ಯುಂಜಯ ಕೋನಾಪುರ ಮೊ.ಸಂ.:9739228720 ಅವರನ್ನು ನಿಯೋಜಿಸಲಾಗಿದೆ.
ರೈತರು ಖರೀದಿ ಕೇಂದ್ರಕ್ಕೆ ತೆರಳಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
