ಶ್ರೀಗಂಧದ ಮರಗಳನ್ನು ಬೆಳೆದ ರೈತರಿಗೆ ಗುಡ್ ನ್ಯೂಸ್ : ‘KS&D’L ದರದಲ್ಲಿ ಮಾರಾಟ ಮಾಡಲು ಅವಕಾಶ

ಬೆಂಗಳೂರು : ಶ್ರೀಗಂಧ ಬೆಳೆದ  ರೈತರು ಶ್ರೀಗಂಧವನ್ನು ಮಾರಾಟ ಮಾಡಲು ಬಯಸಿದಲ್ಲಿ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಲು ಕೋರುತ್ತೇವೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಶ್ರೀಗಂಧ ಬೆಳೆಯುವ ಬೆಳೆಗಾರರು ತಮ್ಮ ಜಮೀನು ಅಥವಾ ನಿವೇಶನದಲ್ಲಿ ಸರಾಸರಿ 20 ವರ್ಷ ಮೇಲ್ಪಟ್ಟ ಶ್ರೀಗಂಧದ ಮರಗಳಿದ್ದಲ್ಲಿ ನಮ್ಮ ಸರ್ಕಾರದ ಅರಣ್ಯ ಇಲಾಖೆ / ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ ಲಿಮಿಟೆಡ್ ದರದಲ್ಲಿ ಮಾರಾಟ ಮಾಡಲು ಬಯಸಿದಲ್ಲಿ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಲು ಕೋರುತ್ತೇವೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಯು ಕರ್ನಾಟಕ ಸರ್ಕಾರದ ಉದ್ಯಮವಾಗಿದ್ದು, ಸದರಿ ಕಾರ್ಖಾನೆಯು ವಿಶ್ವವಿಖ್ಯಾತ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಸುಮಾರು 38 ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಕಂಪನಿಗೆ ಮಾಸಿಕ ಸರಾಸರಿ 600 ಕೆಜಿ ಶ್ರೀಗಂಧದೆಣ್ಣೆ ಹಾಗೂ ವರ್ಷಕ್ಕೆ ಸುಮಾರು 150 ಮೆಟ್ರಿಕ್ ಟನ್ಗಳಷ್ಟು ಶ್ರೀಗಂಧದ ಚೇಗು ಮತ್ತು ಬೇರು [Heart-wood & roots] ಅವಶ್ಯಕತೆಯಿರುತ್ತದೆ. ದೇಶದಾದ್ಯಂತ ಶ್ರೀಗಂಧ ಬೆಳೆಯುವ ಬೆಳೆಗಾರರು ತಮ್ಮ ಜಮೀನು ಅಥವಾ ನಿವೇಶನದಲ್ಲಿ ಸರಾಸರಿ 20 ವರ್ಷ ಮೇಲ್ಪಟ್ಟ ಶ್ರೀಗಂಧದ ಮರಗಳಿದ್ದಲ್ಲಿ ಪ್ರಸಕ್ತ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ / ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ದರದಲ್ಲಿ ಮಾರಾಟ ಮಾಡಲು ಇಚ್ಚಿಸಿದ್ದಲ್ಲಿ ಕಾರ್ಖಾನೆಯೊಡನೆ ಒಡಂಬಡಿಕೆ ಮಾಡಿಕೊಂಡು, ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಲು ಕೋರಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read