ಬೆಂಗಳೂರು: ಕೃಷಿ ಪಂಪ್ಸೆಟ್ ಗಳಿಗೆ ಕುಸುಮ್ -ಬಿ ಸೋಲಾರ್ ಪವರ್ ಯೋಜನೆ ಜಾರಿಗೊಳಿಸಿದ್ದ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಕುಸುಮ್ -ಸಿ ಸೋಲಾರ್ ಯೋಜನೆ ಜಾರಿಗೆ ಕ್ರಮ ಕೈಗೊಂಡಿದೆ.
ಕುಸುಮ್ -ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಮುಂದೆ ಬರುವವರಿಗೆ ಸರ್ಕಾರ ಪ್ರೋತ್ಸಾಹಕರ ಸೌಲಭ್ಯ ನೀಡಲಿದೆ. ಉತ್ಪಾದನೆಯಾದ ಸೋಲಾರ್ ವಿದ್ಯುತ್ ಅನ್ನು ಸಮೀಪದ ಗ್ರಿಡ್ ಗೆ ನೀಡಲು ಉದ್ದೇಶಿಸಲಾಗಿದೆ.
ಕುಸುಮ್ -ಸಿ ಯೋಜನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸಿ ಗ್ರಿಡ್ ಗೆ ವಿದ್ಯುತ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ತೊಂಡೆಬಾವಿ ಸಮೀಪ ಕುಸುಮ್ -ಸಿ ಯೋಜನೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಲಿದ್ದಾರೆ.
ಕುಸುಮ್ –ಬಿ ಯೋಜನೆಯಡಿ ರೈತರು ಸ್ವಂತ ಜಾಗ ಹೊಂದಿದ್ದರೆ ಪಂಪ್ಸೆಟ್ ಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುವುದರಿಂದ ಅನೇಕ ರೈತರು ಅಳವಡಿಸಿಕೊಂಡಿದ್ದಾರೆ.