ಮುಂಬೈ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(EPFO) ಚಂದಾದಾರರಿಗೆ 2024- 25 ನೇ ಹಣಕಾಸು ವರ್ಷದ ಬಡ್ಡಿ ಜಮಾ ಪ್ರಕ್ರಿಯೆ ಆರಂಭವಾಗಿದೆ.
ಸುಮಾರು 7ಳು ಕೋಟಿ ಚಂದಾದಾರರಿಗೆ ಶೇಕಡ 8.25ರ ಬಡ್ಡಿ ಸಂದಾಯ ಮಾಡಲಾಗುವುದು. ಆಗಸ್ಟ್ ಅಂತ್ಯದೊಳಗೆ ಎಲ್ಲಾ ಇಪಿಎಫ್ ಚಂದಾದಾರರಿಗೆ ಬಡ್ಡಿ ಜಮೆ ಮಾಡಲಾಗುವುದು ಎಂದು ಇಪಿಎಫ್ಒ ತಿಳಿಸಿದೆ.
ಇಪಿಎಫ್ ಖಾತೆಗೆ ಮೂರು ವರ್ಷ ಉದ್ಯೋಗದಾತರ ಪಾಲು ಸಂದಾಯವಾಗದೆ ಇದ್ದರೆ ಖಾತೆ ಸ್ಥಗಿತವಾಗುವುದು. ಇಂತಹ ಸನ್ನಿವೇಶದಲ್ಲಿ ಬಡ್ಡಿ ಪಾವತಿ ಆಗುವುದಿಲ್ಲ. ಉದ್ಯೋಗಿಗಳು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಸೇರಿದಾಗ ಇಪಿಎಫ್ ಖಾತೆಯನ್ನು ತಕ್ಷಣವೇ ವರ್ಗಾಯಿಸಿಕೊಳ್ಳಬೇಕು ಎಂದು ಹೇಳಲಾಗಿದೆ.