ಉದ್ಯೋಗಿಗಳಿಗೆ ಗುಡ್ ನ್ಯೂಸ್: ಶೇ. 11.3ರವರೆಗೆ ವೇತನ ಹೆಚ್ಚಳ ಸಾಧ್ಯತೆ

ಮುಂಬೈ: ದೇಶದ ಕಾರ್ಪೊರೇಟ್ ಕಂಪನಿಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ತಮ್ಮ ನೌಕರರ ವೇತನವನ್ನು ಶೇಕಡ 6.2 ರಿಂದ ಶೇಕಡ 11.3ರ ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

ಟೀಮ್ ಲೀಸ್ ಸರ್ವಿಸಸ್ ವರದಿ ಈ ವೇತನ ಹೆಚ್ಚಳದ ಬಗ್ಗೆ ಅಂದಾಜು ಮಾಡಿದೆ. ಬೇರೆ ಬೇರೆಯ ಉದ್ಯಮ ವಲಯಗಳಲ್ಲಿ ಶೇಕಡ 6.2 ರಿಂದ ಶೇಕಡ 11.3ರ ವರೆಗೆ ವೇತನ ಹೆಚ್ಚಳವಾಗಬಹುದು. ಕೆಲವು ರೀತಿಯ ಉದ್ಯೋಗಿಗಳ ವೇತನದಲ್ಲಿ ಶೇಕಡ 13.8ರಷ್ಟು ಏರಿಕೆಯಾಗುವ ಆಗಬಹುದು ಎಂದು ವರದಿ ಹೇಳಿದೆ.

20 ನಗರಗಳ 23 ಉದ್ಯಮ ವಲಯಗಳ 1308 ಕಂಪೆನಿಗಳಿಂದ ಮಾಹಿತಿ ಪಡೆದುಕೊಂಡು ಟೀಮ್ ಲೀಸ್ ಸರ್ವಿಸಸ್ ಈ ವರದಿಯನ್ನು ಸಿದ್ಧಪಡಿಸಿದೆ. ಇವಿ ಹಾಗೂ ಇವಿ ಸಂಬಂಧಿತ ಮೂಲ ಸೌಕರ್ಯ ವಲಯದ ಉದ್ಯಮಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಕಡ 11.3ರಷ್ಟು ವೇತನ ಹೆಚ್ಚಳವಾಗಬಹುದು. ಗ್ರಾಹಕ ಬಳಕೆಯ ಉಪಕರಣಗಳ ವಲಯಗಳಲ್ಲಿ 10.7% ರಷ್ಟು, ರಿಟೇಲ್ ನಲ್ಲಿ ಶೇಕಡ 10.7 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read