ನವದೆಹಲಿ: ಉದ್ಯೋಗದಾತರು ಭವಿಷ್ಯ ನಿಧಿ(PF)ಗೆ ಸಕಾಲದಲ್ಲಿ ಪಾವತಿ ಮಾಡುತ್ತಿರುವ ಬಗ್ಗೆ ತಿಳಿಯಲು ಇನ್ನು ಮುಂದೆ ಪೋರ್ಟಲ್ ಗೆ ಲಾಗಿನ್ ಆಗುವ ಅಗತ್ಯವಿಲ್ಲ. ನೌಕರರ ಭವಿಷ್ಯ ನಿಧಿ ಸಂಸ್ಥೆಗೆ(EPFO) ಒಂದು ಮಿಸ್ಡ್ ಕಾಲ್ ಇಲ್ಲವೇ ಎಸ್ಎಂಎಸ್ ಕಳುಹಿಸಿದ ಕೂಡಲೇ ಉದ್ಯೋಗಿಗಳ ಇತ್ತೀಚಿನ ಭವಿಷ್ಯ ನಿಧಿ ವಿವರಗಳು ಲಭ್ಯವಾಗಲಿದೆ.
ಎರಡು ಬಾರಿ ರಿಂಗ್ ಆದ ಕೂಡಲೇ ಕರೆ ಸ್ವಯಂಚಾಲಿತವಾಗಿ ಸಂಪರ್ಕ ಕಡಿತವಾಗಲಿದೆ. ಕೆಲವೇ ನಿಮಿಷಗಳಲ್ಲಿ ವಿವರಗಳು ಎಸ್ಎಂಎಸ್ ನಲ್ಲಿ ನಿಮ್ಮ ಮೊಬೈಲ್ ಗೆ ಬರುತ್ತವೆ ಎಂದು ಇಪಿಎಫ್ಒ ತಿಳಿಸಿದೆ.
ಉದ್ಯೋಗಿಗಳ ಯುನಿವರ್ಸಲ್ ಅಕೌಂಟ್ ನಂಬರ್ ಸಕ್ರಿಯವಾಗಿರಬೇಕು ಮತ್ತು ಮೊಬೈಲ್ ಸಂಖ್ಯೆಯನ್ನು ಪಿಎಫ್ ಜೊತೆ ಜೋಡಣೆ ಮಾಡಿರಬೇಕು. ಇಪಿಎಫ್ ಸದಸ್ಯರು ಪಿಎಫ್ ವಂತಿಗೆ ಪಾವತಿ ಬಗ್ಗೆ ಮಾಹಿತಿ ಚೆಕ್ ಮಾಡಲು 99660 44425 ಮಿಸ್ಡ್ ಕಾಲ್ ನೀಡಬಹುದಾಗಿದೆ.