ಉದ್ಯೋಗಿಗಳಿಗೆ ಗುಡ್ ನ್ಯೂಸ್: ಮುಖ ಚಹರೆ ಮೂಲಕ UAN ಖಾತೆ ಸೃಷ್ಟಿಗೆ EPFO ಹೊಸ ಫೀಚರ್

ನವದೆಹಲಿ: ಉದ್ಯೋಗಿಗಳು ಮುಖ ಚಹರೆ ದೃಢೀಕರಣದ ಮೂಲಕ UAN ಖಾತೆ ಸಂಖ್ಯೆ ಸೃಷ್ಟಿಸಲು ಅಥವಾ ಸಕ್ರಿಯಗೊಳಿಸಲು EPFO ಹೊಸ ಫೀಚರ್ ಪರಿಚಯಿಸಿದೆ.

ಉಮಂಗ್ ಮೊಬೈಲ್ ಆಪ್ ಮೂಲಕ ಉದ್ಯೋಗಿಗಳ ನೇರವಾಗಿ ಆಧಾರ್ ಆಧರಿತ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನದಡಿ ಯುಎಎನ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಾಹಿತಿ ನೀಡಿದ್ದಾರೆ.

ಇಪಿಎಫ್ಒ ದಿಂದ ಈ ಡಿಜಿಟಲ್ ಸೇವೆಗೆ ಚಾಲನೆ ನೀಡಲಾಗಿದ್ದು, ಕೋಟ್ಯಂತರ ಚಂದಾದಾರರಿಗೆ ಸುರಕ್ಷಿತವಾದ ಈ ಡಿಜಿಟಲ್ ಸೇವೆ ಸಿಗಲಿದೆ. ಉದ್ಯೋಗಿ ನೇರವಾಗಿ ಯುಎಎನ್ ಸೃಷ್ಟಿಸಬಹುದು. ಉದ್ಯೋಗದಾತ ಸಂಸ್ಥೆಯೂ ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಯ ಯುಎಎನ್ ಅನ್ನು ಈ ಪ್ರಕ್ರಿಯೆ ಮೂಲಕ ಸೃಜಿಸಬಹುದು ಎಂದು ಹೇಳಿದ್ದಾರೆ.

ಈಗಾಗಲೇ ಯುಎಎನ್ ಸೃಷ್ಟಿಸಿ ಸಕ್ರಿಯವಾಗಿಲ್ಲದ ನಂಬರ್ ಗಳನ್ನು ಕೂಡ ಈ ಮೂಲಕ ಸಕ್ರಿಯಗೊಳಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಮುಖ ಚಹರೆ ದೃಢೀಕರಣ ಮೂಲಕ ಡಿಜಿಟಲ್ ರೂಪದ ಜೀವನ್ ಪ್ರಮಾಣ ಪತ್ರ ವಿತರಣೆಗೆ ಇಪಿಎಫ್ಒ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಉದ್ಯೋಗಿ ಮೊದಲ ಉಮಾಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮುಖಚಹರೆ ಮೂಲಕ ಯುಎಎನ್ ಸರ್ವಿಸ್ ಅಡಿ ಅಲಾಟ್ ಮೆಂಟ್ ಮತ್ತು ಅಕ್ಟಿವೇಶನ್ ವಿಭಾಗಕ್ಕೆ ಹೋಗಿ ಸೂಚಿಸಿದ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರ ಆಧಾರ್ ಸಂಖ್ಯೆ ಮತ್ತು ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆ ನಮೂದಿಸಬೇಕು. ಇದಕ್ಕೆ ಒಟಿಪಿ ಬರಲಿದ್ದು, ಅದನ್ನು ನಮೂದಿಸಿದ ಬಳಿಕ ಯುಎಎನ್ ಸೃಷ್ಟಿ ಆಗಲಿದೆ. ನೋಂದಾಯಿತ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಯುಎಎನ್ ನಂಬರ್ ಮಾಡಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read