ದೇಗುಲಗಳಿಗೆ ಭೇಟಿ ನೀಡುವ ಭಕ್ತರಿಗೆ ಗುಡ್‌ ನ್ಯೂಸ್:‌ ವಿವಿಧ ಸೇವೆ ಸೇರಿದಂತೆ ವಸತಿ ಬುಕ್‌ ಮಾಡಲು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ರಾಜ್ಯ ಹಾಗೂ ಹೊರ ರಾಜ್ಯದ ದೇಗುಲಗಳಿಗೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ಗುಡ್‌ ನ್ಯೂಸ್‌ ಒಂದು ಇಲ್ಲಿದೆ. ದೇವಾಲಯಗಳಿಗೆ ಹೋಗುವ ಭಕ್ತರು ಇನ್ನು ಮುಂದೆ ಮೊಬೈಲ್‌ ಆ್ಯಪ್‌ನಲ್ಲೇ ತಮಗೆ ಬೇಕಾದ ಸೇವೆಗಳನ್ನು ಬುಕ್‌ ಮಾಡಿಕೊಂಡು ಹೋಗಬಹುದಾಗಿದೆ. ಸೇವೆಗಳು ಮಾತ್ರವಲ್ಲದೆ ರೂಂ ಬುಕ್ಕಿಂಗ್‌, ಪಾರ್ಕಿಂಗ್‌ ಗೂ ಜಾಗ ಬುಕ್‌ ಮಾಡಿಕೊಳ್ಳಬಹುದು.

ದೇವಾಲಯಗಳಿಗೆ ಹೋಗುವ ದಿನ ನಿಗದಿ ಮಾಡಿಕೊಂಡರೆ ಸಾಕು. ನಿಮಗೆ ಸಮಯ ಸಿಕ್ಕಾಗ ಮೊಬೈಲ್‌ನಲ್ಲೇ ಬೇಕಾದ ರೂಂ, ಬೇಕಾದ ಪೂಜಾ ಸೇವೆಗಳನ್ನು ಮೊಬೈಲ್‌ ಆ್ಯಪ್‌ನಲ್ಲೇ ಬುಕ್‌ ಮಾಡಿಕೊಳ್ಳಬಹುದು. ನಿಗದಿತ ಸಮಯಕ್ಕೆ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬಹುದು. ಈ ಕುರಿತ ವಿವರ ಇಲ್ಲಿದೆ.

ಇದಕ್ಕಾಗಿ ನೀವು https://karnatakatemplesaccommodation.com/ ವೆಬ್‌ ಸೈಟ್‌ ಗೆ ಭೇಟಿ ನೀಡಬೇಕಾಗುತ್ತದೆ. ಲಭ್ಯವಿರುವ ದೇಗುಲಗಳ ವಸತಿ ಗೃಹ ಹಾಗೂ ಇತರೆ ವಿವರ ಇಲ್ಲಿದೆ.

ಇಲ್ಲಿ ಕರ್ನಾಟಕ ಪ್ರವಾಸಿ ಸೌಧ, ತಿರುಮಲ, ತಿರುಪತಿ

ಕರ್ನಾಟಕ ರಾಜ್ಯ ಛತ್ರ,‌ ತುಳಜಾಪುರ

ಕರ್ನಾಟಕ ರಾಜ್ಯ ಛತ್ರ, ತಿರುಚನೂರ್, ನಾರಾಯಣವನಂ

ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವಸತಿ ಗೃಹ, ದಕ್ಷಿಣ ಕನ್ನಡ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಸತಿ ಗೃಹ, ಚಾಮುಂಡಿ ಬೆಟ್ಟ, ಮೈಸೂರು

ಶ್ರೀ ರೇವಣಸಿದ್ದೇಶ್ವರಸ್ವಾಮಿ ದೇವಸ್ಥಾನದ ವಸತಿ ಗೃಹ, ರಾಮನಗರ

ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಸತಿ ಗೃಹ, ಬಂಟ್ವಾಳ, ದಕ್ಷಿಣ ಕನ್ನಡ

ಶ್ರೀ ಮಂಜುನಾಥ ದೇವಸ್ಥಾನ ವಸತಿ ಗೃಹ, ಕದ್ರಿ, ದಕ್ಷಿಣ ಕನ್ನಡ

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ವಸತಿ ಗೃಹ, ದೇವರಾಯನದುರ್ಗ, ತುಮಕೂರು

ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ವಸತಿ ಗೃಹ, ರಾಮನಗರ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಸತಿ ಗೃಹ, ಕಟೀಲು, ದಕ್ಷಿಣ ಕನ್ನಡ

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ವಸತಿ ಗೃಹ, ನಾಯಕನಹಟ್ಟಿ, ಚಿತ್ರದುರ್ಗ

ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ವಸತಿ ಗೃಹ, ಬೆಂಗಳೂರು ಗ್ರಾಮಾಂತರ

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ವಸತಿ ಗೃಹ, ಕಮಲಶಿಲೆ, ಉಡುಪಿ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಸತಿ ಗೃಹ, ಬಪ್ಪನಾಡು, ದಕ್ಷಿಣ ಕನ್ನಡ

ಶ್ರೀ ಹುಲಿಗೆಮ್ಮ ದೇವಸ್ಥಾನದ ವಸತಿ ಗೃಹ, ಕೊಪ್ಪಳ

ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವಸತಿ ಗೃಹ, ಮೈಸೂರು

ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ವಸತಿ ಗೃಹ, ಸವದತ್ತಿ, ಬೆಳಗಾವಿ

ಶ್ರೀ ಮೂಕಾಂಬಿಕಾ ದೇವಸ್ಥಾನದ ವಸತಿ ಗೃಹ, ಕೊಲ್ಲೂರು, ಉಡುಪಿ

ಶ್ರೀ ಗುರು ಬಸವೇಶ್ವರಸ್ವಾಮಿ ದೇವಸ್ಥಾನದ ವಸತಿ ಗೃಹ, ಕೊಟ್ಟೂರು, ವಿಜಯನಗರ

ಶ್ರೀ ಬಿಳಿಗಿ ರಂಗನಾಥಸ್ವಾಮಿ ದೇವಸ್ಥಾನದ ವಸತಿ ಗೃಹ, ಚಾಮರಾಜನಗರ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಸತಿ ಗೃಹ, ಮಂದಾರ್ತಿ, ಉಡುಪಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read