ಮುಂಬೈ: ಬ್ಯಾಂಕ್ ಗೆ ಚೆಕ್ ಗಳನ್ನು ಸಲ್ಲಿಸಿದ ಕೆಲವೇ ಗಂಟೆಯಲ್ಲಿ ಹಣ ವರ್ಗಾವಣೆಯಾಗುವ ಸೌಲಭ್ಯವನ್ನು ಆರ್.ಬಿ.ಐ. ಅಕ್ಟೋಬರ್ 4 ರಿಂದ ಜಾರಿಗೊಳಿಸಲಿದೆ.
ಈಗ ಇರುವ ವ್ಯವಸ್ಥೆಯಲ್ಲಿ ಚೆಕ್ ಗಳನ್ನು ಬ್ಯಾಂಕ್ ಗೆ ಸಲ್ಲಿಸಿದ ನಂತರ ಹಣದ ವರ್ಗಾವಣೆ ಪೂರ್ಣವಾಗಲು ಗರಿಷ್ಠ ಎರಡು ಕೆಲಸದ ದಿನಗಳು ಬೇಕಿದೆ. ಹೊಸ ವ್ಯವಸ್ಥೆ ಜಾರಿಯಾದ ನಂತರ ಚೆಕ್ ಗಳನ್ನು ಸ್ಕ್ಯಾನ್ ಮಾಡಿ ಸಂಬಂಧಿಸಿದ ವಿಭಾಗಕ್ಕೆ ಸಲ್ಲಿಸಿ ಕೆಲವೇ ಗಂಟೆಗಳಲ್ಲಿ ಹಣದ ವರ್ಗಾವಣೆಗೆ ಅನುಮೋದನೆ ದೊರೆಯಲಿದೆ.
ಚೆಕ್ ಸಲ್ಲಿಕೆಯಾದ ಬಳಿಕ ಹಣದ ವರ್ಗಾವಣೆಯನ್ನು ಪೂರ್ಣಗೊಳಿಸುವ ವ್ಯವಸ್ಥೆಯಲ್ಲಿನ ದಕ್ಷತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಮತ್ತು ಹಣದ ವರ್ಗಾವಣೆ ಅಪಾಯ ಕಡಿಮೆ ಮಾಡಲು ಆರ್.ಬಿ.ಐ. ಈಗಿನ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಿದೆ.
ಒಂದೊಂದು ಬ್ಯಾಚ್ ನಲ್ಲಿ ಚೆಕ್ ಗಳನ್ನು ಪರಿಶೀಲಿಸುವ ಬದಲು ಅವುಗಳನ್ನು ನಿರಂತರವಾಗಿ ಪರಿಶೀಲಿಸಿ ಹಣದ ವರ್ಗಾವಣೆ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಚೆಚ್ ಗಳನ್ನು ಸ್ವೀಕರಿಸುವ ಬ್ಯಾಂಕ್ ಗಳು ಅವುಗಳನ್ನು ಸ್ಕ್ಯಾನ್ ಮಾಡಿ ಸಂಬಂಧಿಸಿದ ಏಜೆನ್ಸಿಗೆ ತಕ್ಷಣವೇ ನಿರಂತರವಾಗಿ ರವಾನಿಸುತ್ತವೆ.
ಮೊದಲನೇ ಹಂತ ಅಕ್ಟೋಬರ್ 4 ರಿಂದ ಜಾರಿಯಾಗಲಿದ್ದು, ಎರಡನೇ ಹಂತ 2026ರ ಜನವರಿ 3ರಿಂದ ಜಾರಿಯಾಗಲಿದೆ ಎಂದು ಆರ್‌ಬಿಐ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಲಾಗಿದೆ.