BIG NEWS : ‘CBSE’ 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಡಿಸ್ಟಿಂಕ್ಷನ್, ಪರ್ಸೆಂಟೇಜ್ ಇಲ್ಲ

ನವದೆಹಲಿ : ‘ಸಿಬಿಎಸ್ಇ’ 10 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, 10 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೇಣಿ/ಡಿಸ್ಟಿಂಕ್ಷನ್ ಒಟ್ಟು ಶೇಕಡಾವಾರು ಅಂಕಗಳನ್ನು ತಿಳಿಸದೇ ಇರುವ ತೀರ್ಮಾನ ಕೈಗೊಂಡಿದೆ. ಸಿಬಿಎಸ್ ಇ ಇನ್ನು ಮುಂದೆ ವಿದ್ಯಾರ್ಥಿಗಳ ಶೇಕಡವಾರು ಅಂಕಗಳನ್ನು ಲೆಕ್ಕ ಹಾಕುವುದಿಲ್ಲ ಹಾಗೂ ಘೋಷಣೆ ಮಾಡುವುದಿಲ್ಲ.

10 ಹಾಗೂ12 ನೇ ತರಗತಿಯ ವಿದ್ಯಾರ್ಥಿ 5 ಕ್ಕಿಂತ ಹೆಚ್ಚು ವಿಷಯ ತೆಗೆದುಕೊಂಡಿದ್ದರೆ, ಆ ಪೈಕಿ ಯಾವ ಐದು ಅತ್ಯುತ್ತಮ ವಿಷಯಗಳನ್ನು ಪರಿಗಣಿಸಬೇಕು ಎಂದು ವಿದ್ಯಾರ್ಥಿ ಪ್ರವೇಶ ಪಡೆಯುವ ಶಿಕ್ಷಣ ಸಂಸ್ಥೆ ನಿರ್ಧರಿಸಲಿದೆ. ಹೌದು, ಮುಂದೆ ಆ ವಿದ್ಯಾರ್ಥಿ ಪ್ರವೇಶ ಪಡೆಯುವ ಅಥವಾ ಉದ್ಯೋಗ ಪಡೆಯುವ ಸಂಸ್ಥೆಯವರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಸಿಬಿಎಸ್ ಇ ಪರೀಕ್ಷಾ ನಿಯಂತ್ರಕರಾದ ಡಾ ಸಾನ್ಯಂ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ. 10 ಹಾಗೂ 12 ನೇ ತರಗತಿ ಸಿಬಿಎಸ್ ಇ ಪರೀಕ್ಷೆಗಳು ಫೆ.15 ರಿಂದ ಆರಂಭವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read