BIG NEWS : ಬ್ರಾಹ್ಮಣ ಸಮುದಾಯಕ್ಕೆ ಗುಡ್ ನ್ಯೂಸ್ : ‘ಸ್ವಾವಲಂಬಿ’ ಯೋಜನೆಯಡಿ 1 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು : ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ವಾವಲಂಬಿ ಯೋಜನೆಯಡಿ 1 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ.

ಅರ್ಜಿದಾರರ ಗಮನಕ್ಕೆ

1. ಸದರಿ ಯೋಜನೆಯಡಿ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗಕ್ಕೆ ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗೃಹ/ ಗುಡಿ ಕೈಗಾರಿಕೆ ಇತ್ಯಾದಿ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ಪಡೆದ ಸಾಲಕ್ಕೆ ಸಹಾಯ ಧನ ನೀಡಲಾಗುವುದು.

2. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಿಂದ 2023-24 ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ ಸಾಲವನ್ನು ಪಡೆದಿರಬೇಕು.

3. ಈ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವುದು.

4. ಸದರಿ ಸಹಾಯಧನಕ್ಕಾಗಿ ಸಲ್ಲಿಸಲಾಗುವ ಅರ್ಜಿಯನ್ನು, ಸಾಲ ಪಡೆದ ಬ್ಯಾಂಕ್ ನಿಂದ ದೃಢೀಕರಣಗೊಳಿಸಿ ಮಂಡಳಿಗೆ ಸಲ್ಲಿಸುವುದು.

ಭರ್ತಿ ಮಾಡಿದ ಅರ್ಜಿಯನ್ನು ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, 14/3, ಅನೆಕ್ಸ್ ಕಟ್ಟಡ, 3ನೇ ಮಹಡಿ, ಶ್ರೀ ಅರವಿಂದ ಭವನ, ದಿ ಮಿಥಿಕ್ ಸೊಸೈಟಿ ಆವರಣ, ನೃಪತುಂಗ ರಸ್ತೆ, ಬೆಂಗಳೂರು-01 ಇಲ್ಲಿದೆ ಕಳುಹಿಸಿಕೊಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read