ಆಹಾರ ಇಲಾಖೆಯಿಂದ `BPL’ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಮನೆ ಮನೆಗೆ `ರೇಷನ್ ಸರಬರಾಜು’

ಬೆಂಗಳೂರು : ಹಿರಿಯ ನಾಗರಿಕರಿಗೆ ಆಹಾರ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಬಿಪಿಎಲ್​ ಕಾರ್ಡ್​​ ಹೊಂದಿದ ಅಂಗವಿಕಲರು, 90 ವರ್ಷ ಮೇಲ್ಪಟ್ಟ ಫಲಾನುಭವಿಗಳ ಮನೆಗಳಿಗೆ ಆಹಾರ ಇಲಾಖೆ ಪ್ರಾಯೋಗಿಕವಾಗಿ ಪಡಿತರ ಸರಬರಾಜು ಮಾಡುತ್ತಿದೆ.

ಆಹಾರ ಇಲಾಖೆ ಈಗಾಗಲೆ ಅಂಗವಿಕಲರು ಮತ್ತು 90 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಿಸಿದೆ. ಈ ಮನೆಗಳಿಗೆ ರಾಜ್ಯಾದ್ಯಂತ ಪಡಿತರ ನೀಡುತ್ತಿದೆ.  ಆಹಾರ ಇಲಾಖೆ ಮೊದಲು ಉಚಿತವಾಗಿ ಪಡಿತರ ಸರಬರಾಜು ಮಾಡಲು ನಿರ್ಧರಿಸಿದ್ದು, ನಂತರ 50 ರೂ. ದರ ನಿಗದಿ ಮಾಡಲು ಆಹಾರ ಇಲಾಖೆ ನಿರ್ಧಾರ ಮಾಡಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದ ಕೊಡಲೇ ಅಧಿಕೃತವಾಗಿ ಮನೆ ಮನೆಗೆ ಪಡಿತರ ವಿತರಿಸಲಿದೆ.

ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಮದ ಆಹಾರ ಇಲಾಕೆ ಕ್ರಮ ಕೈಗೊಂಡಿದ್ದು, ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಸೇರಿ ಪಡಿತರ ಪಡೆದುಕೊಳ್ಳಬೇಕಿದೆ. ಹಿರಿಯರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಲಾಗಿದೆ.

ಪಡಿತರ ಚೀಟಿಯಲ್ಲಿ ನಮೂದಿಸಿದಂತೆ 75 ವರ್ಷ ಒಳಗಿನ ಸದಸ್ಯರು ಇಲ್ಲವೆ, 75 ವರ್ಷದ ದಾಟಿದ ವೃದ್ಧರು, ದಂಪತಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಸಲು ಆಹಾರ ಇಲಾಖೆ ಮುಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read