ನವದೆಹಲಿ: ಹಣದುಬ್ಬರದಲ್ಲಿ ತೀವ್ರ ಕುಸಿತ ಮತ್ತು ಜಿಡಿಪಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರೆಪೊ ದರ ಕಡಿತಗೊಳಿಸುವ ಮೂಲಕ ಬಡ್ಡಿ ದರ ಇಳಿಕೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮುಂದಾಗುವ ಸಾಧ್ಯತೆ ಇದೆ.
ಡಿಸೆಂಬರ್ 3ರ ಇಂದಿನಿಂದ ಡಿ. 5ರವರೆಗೆ ಮುಂಬೈನಲ್ಲಿ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದೆ/ ಸಭೆಯಲ್ಲಿ ರೆಪೊ ದರವನ್ನು ಶೇಕಡ 0.25ರಷ್ಟು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕೇರ್ ಎಡ್ಜ್ ತಿಳಿಸಿದೆ.
ಪ್ರಸ್ತುತ ರೆಪೋ ದರ ಶೇಕಡ 5.5 ರಷ್ಟು ಇದೆ. ರೆಪೊ ದರ ಹೇಳಿಕೆಯಾದರೆ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.
ಅಕ್ಟೋಬರ್ ನಲ್ಲಿ ಹಣದುಬ್ಬರ ಶೇಕಡ 0.3ಕ್ಕೆ ಇಳಿದಿದೆ. ಇದು ಆರ್ಬಿಐನ ಶೇಕಡ 4ರ ಗುರಿ ಮಿತಿಗಿಂತ ಬಹಳ ಕಡಿಮೆಯಾಗಿದ್ದು, ಇದು ರೆಪೋ ದರ ಕಡಿತಕ್ಕೆ ಅವಕಾಶ ಕಲ್ಪಿಸಿದೆ.
