‘BMTC’ ನೌಕರರಿಗೆ ಗುಡ್ ನ್ಯೂಸ್: ‘ಗುಂಪು ವಿಮಾ ಯೋಜನೆ’ ಪರಿಹಾರದ ಮೊತ್ತ 10 ಲಕ್ಷಕ್ಕೆ ಹೆಚ್ಚಳ

ಬೆಂಗಳೂರು : BMTC ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಗುಂಪು ವಿಮಾ ಯೋಜನೆ ಪರಿಹಾರದ ಮೊತ್ತ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಬಿಎಂಟಿಸಿ ಸಿಬ್ಬಂದಿ ಕರ್ತವ್ಯದ ವೇಳೆ ಅಪಘಾತ ಹೊರತುಪಡಿಸಿ ಬೇರೆ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಹಿಂದೆ 3 ಲಕ್ಷ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು 2023ರ ನವೆಂಬರ್ 20ರ ನಂತರದಿಂದ ₹10 ಲಕ್ಷ ನೀಡಲಾಗುತ್ತದೆ.

ಅದರ ಜತೆಗೆ ಸಿಬ್ಬಂದಿ ಅಪಘಾ ತದಿಂದ ಮೃತಪಟ್ಟರೆ 250 ಲಕ್ಷ ಪರಿಹಾರ ಮೊತ್ತ ನೀಡಲಾಗುತ್ತಿದೆ.
ಗುಂಪು ವಿಮಾ ಯೋಜನೆಗಾಗಿ ಬಿಎಂಟಿಸಿ ಸಿಬ್ಬಂದಿಯಿಂದ ಪಡೆಯಲಾಗುವ ಮಾಸಿಕ ವಂತಿಗೆಯನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ಸಿಬ್ಬಂದಿ ವೇತನದಲ್ಲಿ ಮಾಸಿಕ 350 ಕಡಿತಗೊಳಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read