ಬೆಂಗಳೂರಿಗರಿಗೆ ಗುಡ್ ನ್ಯೂಸ್ : ‘ಸಂಚಾರಿ ಕಾವೇರಿ’ ಯೋಜನೆಯಡಿ ಮನೆ ಬಾಗಿಲಿಗೆ ಬರಲಿದೆ ಶುದ್ದ ಕುಡಿಯುವ ನೀರು.!

ಬೆಂಗಳೂರು : ಬೆಂಗಳೂರಿಗರಿಗೆ ಗುಡ್ ನ್ಯೂಸ್ ಎಂಬಂತೆ ಸಂಚಾರಿ ಕಾವೇರಿ ಯೋಜನೆಯಡಿ ಮನೆ ಬಾಗಿಲಿಗೆ ಬರಲಿದೆ ಶುದ್ದ ಕುಡಿಯುವ ನೀರು.

ಹೌದು, ಬಿಐಎಸ್ ಪ್ರಮಾಣಿತ ಶುದ್ಧ ನೀರನ್ನು, BWSSB ಟ್ಯಾಂಕರ್ಗಳ ಮೂಲಕ ಬೆಂಗಳೂರಿನ ಮನೆಮನೆಗೆ ಒದಗಿಸುವ ವಿನೂತನವಾದ ಯೋಜನೆಯನ್ನು ಸರ್ಕಾರ ಆರಂಭಿಸಿದೆ.

ಏನಿದು ಸಂಚಾರಿ ಕಾವೇರಿ ಯೋಜನೆ?
ಬೆಂಗಳೂರು ಜಲಮಂಡಳಿಯ ‘ಸಂಚಾರಿ ಕಾವೇರಿ’ ಯೋಜನೆಯಡಿ, ಮಹಾನಗರಿಯ ಜನತೆಗೆ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೇರವಾಗಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಪ್ರಯೋಜನಗಳೇನು ?
. ಬಿಐಎಸ್ ಪ್ರಮಾಣಿತ ಶುದ್ಧ ಹಾಗೂ ಸ್ವಚ್ಛ ಕುಡಿಯುವ ನೀರು ಲಭ್ಯ
ದರ ಏರಿಕೆಯ ಭಯವಿಲ್ಲದೇ ಜನರು ಮುಕ್ತವಾಗಿ ಟ್ಯಾಂಕರ್ ನೀರು ಬುಕ್ಕಿಂಗ್ ಮಾಡಲು ಅವಕಾಶ
ಯಾವುದೇ ಸರ್ಚಾರ್ಜ್, ಬೇಡಿಕೆ ಹೆಚ್ಚಾಗುವ ದರಗಳ ಭಯವಿಲ್ಲ
ಟ್ಯಾಂಕರ್ ಮಾಫಿಯಾ ಎಂದು ಜನರಲ್ಲಿನ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ಕ್ರಮ
ನಗರದ ಪೂರ್ವ ಮತ್ತು ಪಶ್ಚಿಮ ಭಾಗದ ಪ್ರದೇಶಗಳಿಗೆ ಆದ್ಯತೆ

ಸಮರ್ಪಕ ಕಾರ್ಯ ನಿರ್ವಹಣೆಗೆ ಒತ್ತು:

ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವ ವ್ಯವಸ್ಥೆ
55 ಕಾವೇರಿ ಕನೆಕ್ಟ್ ಸೆಂಟರ್ಗಳ ನಿರ್ಮಾಣ
. ಮೊಬೈಲ್ ಸ್ನೇಹಿ ಆ್ಯಪ್ ಹಾಗೂ ವೆಬ್ಸೈಟ್ ರಚನೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read