GOOD NEWS : ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ : 5 ವರ್ಷಕ್ಕಿಂತ ಹಿಂದಿನ ಬಾಕಿಯ ಬಡ್ಡಿ ಮನ್ನಾ..!

ಬೆಂಗಳೂರು : ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 5 ವರ್ಷಕ್ಕಿಂತ ಹಿಂದಿನ ಬಾಕಿಯ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಆಸ್ತಿ ತೆರಿಗೆ ಹೊರೆಯಿಂದ ಬಳಲುತ್ತಿರುವ ಬೆಂಗಳೂರು ನಿವಾಸಿಗಳ ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇ.50ರಷ್ಟು ವಿನಾಯಿತಿ ಒದಗಿಸುವುದಕ್ಕೆ ಅವಕಾಶ ನೀಡುವ ʼಬಿಬಿಎಂಪಿ ತಿದ್ದುಪಡಿ ಮಸೂದೆ 2024ʼ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಇದರಿಂದ ಬೆಂಗಳೂರಿನ 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5-7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಸೇರಿ 13 ಲಕ್ಷದಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ.

ಈ ಮಸೂದೆಯಿಂದ ಸುಮಾರು 13 ರಿಂದ 15 ಲಕ್ಷ ಬೆಂಗಳೂರಿಗರಿಗೆ ಪ್ರಯೋಜನಕಾರಿಯಾಗಲಿದ್ದು ಮಧ್ಯಮ ಮತ್ತು ದುರ್ಬಲ ವರ್ಗದ ಜನರಿಗೆ ₹2,700 ಕೋಟಿ ಉಳಿತಾಯವಾಗಲಿದೆ. ಸಾಮಾಜಿಕ ಕಲ್ಯಾಣ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಕಟಣೆ ಹೊರಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read