ಬೆಂಗಳೂರು : ಟೋಯಿಂಗ್ ಶಾಕ್ ನಡುವೆ ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಟೋಯಿಂಗ್ ಚಾರ್ಜ್ ಹಾಕದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ.
ಕಳೆದ ಸಲ ನೋ ಪಾರ್ಕಿಂಗ್ ಫೈನ್ ಬಿಟ್ಟು ಹೆಚ್ಚುವರಿ 800 ಶುಲ್ಕ ವಿಧಿಸುತ್ತಿದ್ದರು. ಆದರೆ ಈ ಬಾರಿ ಹೆಚ್ಚುವರಿ ಶುಲ್ಕ ವಿಧಿಸದೇ ಇರಲಿ ಪೊಲೀಸರು ನಿರ್ಧರಿಸಿದ್ದಾರೆ. ಅಂದರೆ ನೀವು ನೋ ಪಾರ್ಕಿಂಗ್ ಫೈನ್ ಮಾತ್ರ ಕಟ್ಟಬೇಕು, ಟೋಯಿಂಗ್ ಶುಲ್ಕ ( ಹೆಚ್ಚುವರಿ ಶುಲ್ಕ) ಕಟ್ಟುವ ಹಾಗಿಲ್ಲ.ಹೆಚ್ಚುವರಿ ಶುಲ್ಕದಿಂದಲೇ ವಾಹನ ಸವಾರರು ಟೋಯಿಂಗ್ ಸಿಬ್ಬಂದಿಗಳ ಜೊತೆ ಗಲಾಟೆ ಮಾಡುತ್ತಿದ್ದರು. ಸದ್ಯಕ್ಕೆ ಈ ಶುಲ್ಕಕ್ಕೆ ಇದೀಗ ಬ್ರೇಕ್ ಬಿದ್ದಿದೆ.
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್
ದಟ್ಟಣೆಗೆ ಕಡಿವಾಣ ಹಾಕಲು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದರು.ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ಸ್ ಗಳನ್ನು ಬಳಸಿಕೊಂಡು ವಾಹನಗಳ ಟೋಯಿಂಗ್ ಮಾಡಲಾಗುವುದು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಬೆಂಗಳೂರು ನಗರದಲ್ಲಿ 9000 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಗರದಲ್ಲಿ 30 ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದ್ದೇವೆ. ರಾತ್ರಿ ವೇಳೆ ಮಹಿಳೆಯರು ಓಡಾಡುವ ಡಾರ್ಕ್ ಏರಿಯಾಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ. ನಿರ್ಭಯ ಯೋಜನೆಯಡಿ ಕೇಂದ್ರ ಸರ್ಕಾರ 667 ಕೋಟಿ ಹಣ ನೀಡಿದ್ದು, ಈ ಹಣವನ್ನು ಮಹಿಳೆಯರ ಸುರಕ್ಷತೆಗಾಗಿ ಖರ್ಚು ಮಾಡಲಾಗಿದೆ. ಬೆಂಗಳೂರು ಸುರಕ್ಷಿತ ನಗರಗಳಲ್ಲಿ ಒಂದು ಎಂದು ಹೈದರಾಬಾದ್ ನ ಸಂಸ್ಥೆಯೊಂದು ವರದಿ ನೀಡಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಕೆಲಸಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.