ಬೆಂಗಳೂರು : ಲಾಲ್ಬಾಗ್ ನಲ್ಲಿ ಆಯೋಜಿಸಲಾಗಿರುವ ತೋಟಗಾರಿಕಾ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ, ನಮ್ಮ ಮೆಟ್ರೋ ದಿನಾಂಕ 15, 17 ಮತ್ತು 18ನೇ ಆಗಸ್ಟ್ 2024 ರಂದು ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ತ್ವರಿತ ಪ್ರಯಾಣಕ್ಕಾಗಿ ಬೆಳಿಗ್ಗೆ, 10.00 ರಿಂದ ರಾತ್ರಿ 08.00 ರವರೆಗೆ ಟೋಕನ್ ಗಳ ಬದಲಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳನ್ನು ರೂ 30/- ನಗದು ಮುಖಾಂತರವಿತರಿಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ.
ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ಖರೀದಿಸಿದ ದಿನದಂದು ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ.
ಸಾರ್ವಜನಿಕರು ಟೋಕನ್, ಕಾರ್ಡ್. ಕ್ಯೂಆರ್ ಟಿಕೆಟ್ಗಳ ಮೂಲಕ ಲಾಲ್ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು. ಮೇಲಿನ ದಿನಾಂಕಗಳಲ್ಲಿ ಮತ್ತು ಅವಧಿಯಲ್ಲಿ ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್ಗಳನ್ನು ನೀಡಲಾಗುವುದಿಲ್ಲ.ಟಿಕೆಟ್ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಲು ವಿನಂತಿಸಿದೆ.ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳ ಬೇಕೆಂದು ಕೋರಿದೆ.
https://twitter.com/OfficialBMRCL/status/1822919461176770891?ref_src=twsrc%5Egoogle%7Ctwcamp%5Eserp%7Ctwgr%5Etweet