ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `UPSC’ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

ಹಿಂದುಳಿದ  ವರ್ಗಗಳ ಕಲ್ಯಾಣ ಇಲಾಖೆಯು ಯುಪಿಎಸ್‍ಸಿ (UPSC) ನಾಗರೀಕ ಸೇವೆ ಹಾಗೂ ಬ್ಯಾಂಕಿಂಗ್ ಪಿ.ಓ. (BANKING P.O)  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿಗಾಗಿ ಹಿಂದುಳಿದ ವರ್ಗಗಗಳ ಪ್ರವರ್ಗ -1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಅಂಗೀಕೃತ ವಿಶ್ವ ವಿದ್ಯಾಲಯದಿಂದ ಯಾವುದಾದರೊಂದು ಪದವಿ ಪಡೆದಿರಬೇಕು,  ಹಿಂದುಳಿದ  ವರ್ಗಗಗಳ ಪ್ರವರ್ಗ -1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಯ ರೂ. 5.00ಲಕ್ಷಗಳ ಮಿತಿಯಲ್ಲಿರಬೇಕು.  ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.  ಪರೀಕ್ಷಾ ಕೇಂದ್ರಗಳು, ದಿನಾಂಕ ಮತ್ತು ಸಮಯವನ್ನು ನಂತರದ ದಿನಗಳಲ್ಲಿ ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.

ಆಸಕ್ತ ವಿದ್ಯಾರ್ಥಿಗಳು  https://bcwd.karnataka.gov.in ಮೂಲಕ ದಿ: 04/12/2023 ರೊಳಗಾಗಿ ಸಲ್ಲಿಸುವುದು.  ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್ ಅಥವಾ ಸಹಾಯವಾಣಿ ಸಂ.: 8050770004 ನ್ನು ಸಂಪರ್ಕಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read