ಶಬರಿಮಲೆಗೆ ಬರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವವರಿಗೆ ದೇವರ ಸುಲಭ ದರ್ಶನಕ್ಕೆ ಅನುಕೂಲವಾಗುವಂತೆ ವಿಶೇಷ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ.

“ಶಬರಿಮಲೆ – ಪೊಲೀಸ್ ಮಾರ್ಗದರ್ಶಿ” ಎಂಬ ಈ ಪೋರ್ಟಲ್ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುತ್ತದೆ. ಭಕ್ತರಿಗೆ ಉಪಯುಕ್ತವಾದ ಎಲ್ಲಾ ಪ್ರಮುಖ ಮಾಹಿತಿಯನ್ನು ಪೋರ್ಟಲ್ ಒಳಗೊಂಡಿದೆ.

ಪೊಲೀಸ್ ಸಹಾಯವಾಣಿ ಸಂಖ್ಯೆಗಳು, ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳು, ಆರೋಗ್ಯ ಸೇವೆಗಳು, ಕೆಎಸ್ಆರ್ಟಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ಠಾಣೆ ಸೇವೆಗಳು ಮತ್ತು ಆಹಾರ ಸುರಕ್ಷತಾ ಮಾಹಿತಿಗಳು ಈ ಪೋರ್ಟಲ್ನಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ಶಬರಿಮಲೆಯ ಇತಿಹಾಸ, ವಾಹನಗಳ ನಿಲುಗಡೆ ಮತ್ತು ಪ್ರತಿ ಜಿಲ್ಲೆಯಿಂದ ಶಬರಿಮಲೆಗೆ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read