GOOD NEWS : ರಾಜ್ಯದ ‘ದ್ವಿತೀಯ PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಶುಲ್ಕ ರಹಿತವಾಗಿ ದ್ವಿತೀಯ, ತೃತೀಯ ಹಂತದಲ್ಲಿ ಉಚಿತ ಪೂರಕ ಪರೀಕ್ಷೆಗೆ ಅವಕಾಶ

ಶಿವಮೊಗ್ಗ : ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಅನುತ್ತೀರ್ಣರಾದ ಅಥವಾ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಶುಲ್ಕ ರಹಿತವಾಗಿ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ಉಚಿತ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪೂರಕ ಪರೀಕ್ಷೆಗೆ ಹಾಜರಾಗಲಿಚ್ಚಿಸುವ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದ ಅವರು ಪರೀಕ್ಷೆಯಲ್ಲಿ ಪಡೆದ ಹೆಚ್ಚಿನ ಅಂಕವನ್ನೇ ತಮ್ಮ ಅಂಕಪಟ್ಟಿಯಲ್ಲಿ ನಮೂದಿಸಿ, ವಿದ್ಯಾರ್ಥಿಗಳ ಹಿತ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಪರೀಕ್ಷೆಗಳು ಇದೇಏಪ್ರಿಲ್ 24ರಂದು ಹಾಗೂ ಮೇ ಮಾಹೆಯ 09ರಂದು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪೋಷಕರು, ವಿದ್ಯಾರ್ಥಿಗಳು,ಶಿಕ್ಷಣ ತಜ್ಞರಿಂದ ಉತ್ತಮ ಅಭಿಪ್ರಾಯ ಮೂಡಿ ಬಂದಿದೆ. ಪರೀಕ್ಷಾ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದ್ದು, ಈ ಅವಕಾಶ ಈ ಬಾರಿ ಮಾತ್ರವಾಗಿರಲಿದೆ. ಪೂರಕ ತರಗತಿಗಳು ಎಂದಿನಂತೆ ಶಾಲೆಯಲ್ಲಿ ನಡೆಯಲಿವೆ ಎಂದರು.

ಏಕತೆ, ಐಕ್ಯತೆ ಮತ್ತು ಸಮಗ್ರತೆಯ ಮೂಲಕ ದೇಶದ ಉನ್ನತಿಗೆ ಹೊಸಭಾಷ್ಯ ಬರೆದ ಮಹನೀಯ ಡಾ.ಬಾಬಾ ಸಾಹೇಬ್ಅಂಬೇಡ್ಕರ್ಅವರು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಬಾಬಾ ಸಾಹೇಬ್ಅಂಬೇಡ್ಕರ್ಅವರ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್ಅಂಬೇಡ್ಕರ್ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.ವಿವಿಧತೆಯಲ್ಲಿ ಏಕತೆಯನ್ನು ಸಾರಿ ಹೇಳುವ, ಜಗತ್ತಿಗೆ ಮಾದರಿಯಾದ ಹಾಗೂ ಎಲ್ಲ ವರ್ಗದ ಜನರ ಹಿತವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂವಿಧಾನ ಬರೆದು ಪ್ರಜಾಪ್ರಭುತ್ವದ ಯಶಸ್ವಿಗೆ ವಿಶೇಷ ಕೊಡುಗೆ ನೀಡಿದ ಅಂಬೇಡ್ಕರ್ಅವರನ್ನು ಸ್ಮರಿಸುವ ಸುದಿನ ಇದಾಗಿದೆ ಎಂದ ಅವರು, ಈ ಯಶಸ್ಸಿಗೆ ಹಿಂದೆ ಅವರ ಅವಿರತ ಶ್ರಮವನ್ನು ಕಡೆಗಣಿಸಲಾಗದು ಎಂದರು.

ಹುಬ್ಬಳ್ಳಿಯಲ್ಲಿ ನಡೆದ ಅಹಿತಕರ ಘಟನೆ ಅಮಾನವೀಯ. ತುಂಬಾ ನೋವಾಗಿದೆ. ಈ ಅಹಿತಕರ ಘಟನೆಗೆ ಕಾರಣವಾದ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡುವುದು ಸರಿಯಾದ ಕ್ರಮವಾಗಿದೆ. ಸಾರ್ವಜನಿಕರೂ ಕೂಡ ಎಚ್ಚರಿಕೆಯಿಂದಿರಬೇಕು. ಸಂತ್ರಸ್ಥ ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಲಿದೆ ಎಂದವರು ನುಡಿದರು.

ಉದರ ಪೋಷಣೆ ನಿಮಿತ್ತ ಹೊರದೇಶ, ರಾಜ್ಯದಿಂದ ವಲಸೆ ಬಂದಿರುವ ಅನೇಕ ಕುಟುಂಬಗಳ ಬಗ್ಗೆ ರಾಜ್ಯದಲ್ಲಿ ಯಾವುದೇ ಮಾಹಿತಿ ಇಲ್ಲವಾಗಿದೆ. ಇಂತಹ ಸಂದರ್ಭಗಳಲ್ಲಿ ಮಾಹಿತಿ ಕಲೆ ಹಾಗೂ ವಲಸಿಗರ ಬಗ್ಗೆ ನಿಗಾವಹಿಸುವ, ಅವರ ಚಲನವಲನಗಳ ಬಗ್ಗೆ ವಿಶೇಷ ಗಮನಹರಿಸಲು ವಲಸಿಗರ ವಿವರಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳಬೇಕಾದ ಅಗತ್ಯವಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ಮಾಡಲಾಗುವುದು. ಈ ವಿಷಯವನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಲಾಗುವುದು ಎಂದವರು ನುಡಿದರು.
ರಾಜ್ಯದ ಜಾತಿಗಣತಿಯ ಬಗ್ಗೆ ಅನೇಕರಲ್ಲಿ ಅಭಿಪ್ರಾಯ ಬೇಧಗಳಿವೆ. ಈ ಬಗ್ಗೆ ಸಮಾಲೋಚನೆ ನಡೆಸಿ, ಅಗತ್ಯ ಕ್ರಮ ವಹಿಸಲಾಗುವುದು. ಈ ಗಣತಿ ರಾಜ್ಯದ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿಯಾಗಲಿದೆ. ಕ್ಯಾಬಿನೆಟ್ನಂತರ ಅಂತಿಮ ಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ ಎಂದರು.

ಮುಂದಿನ ಶೈಕ್ಷಣಕ ಸಾಲಿಗೆ ವಿದ್ಯಾರ್ಥಿಗಳ ಪಠ್ಯಚಟುವಟಿಕೆಗಳಿಗೆ ಪೂರಕವಾಗಿ ಈಗಾಗಲೇ ಶಿಕ್ಷಣ ಇಲಾಖೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿದೆ. ಈಗಾಗಲೇ ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕ ಮತ್ತಿತರ ಪರಿಕರಗಳನ್ನು ನಿಗಧಿಪಡಿಸಿದ ಅವಧಿಯಲ್ಲಿಯೇ ವಿತರಿಸಲು ಕ್ರಮವಹಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು ಮತ್ತಿತರರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read