ಬಟ್ಟೆ, ಚಿನ್ನದ ಅಂಗಡಿಯ ವ್ಯಾಪಾರಸ್ಥರು ಮೈಯನ್ನೆಲ್ಲಾ ಕಣ್ಣಾಗಿಸಿಕೊಂಡು ಉದ್ಯಮ ನೋಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಕಳ್ಳರು ಕ್ಷಣಮಾತ್ರದಲ್ಲಿ ಬೆಲೆಬಾಳುವ ವಸ್ತುಗಳನ್ನು ಎಗರಿಸಿಬಿಡ್ತಾರೆ. ಅಂಥದ್ದೇ ಕೃತ್ಯ ಜರುಗಿದ್ದು ಆನ್ ಲೈನ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಬೆಚ್ಚಿಬೀಳಿಸಿದೆ.
ಉತ್ತರಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ನಡೆದ ಘಟನೆಯೊಂದರಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್‌ನಿಂದ ಯುವತಿಯರ ಗುಂಪೊಂದು 45 ಗ್ರಾಂ ಚಿನ್ನದ ಬಳೆಗಳನ್ನು ಕದ್ದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಚಿನ್ನದ ಬಳೆ ತೆಗೆದುಕೊಂಡು ಅವರು ತುಂಬಾ ಸುಲಭವಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಮಾಲ್‌ನ ಭದ್ರತಾ ತಂಡ ಮತ್ತು ಕಲ್ಯಾಣ್ ಜ್ಯುವೆಲರ್ಸ್ ಸಂಸ್ಥೆಯ ತಂಡ ಕಳ್ಳಿಯರನ್ನು ಗುರುತಿಸಲು ಮತ್ತು ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕಳ್ಳತನದ ಘಟನೆಯ ವಿಡಿಯೋ ಸೆಪ್ಟೆಂಬರ್ 16 ರಂದು ವೈರಲ್ ಆಗಿತ್ತು.
https://twitter.com/ImranTG1/status/1835554339403751877?ref_src=twsrc%5Etfw%7Ctwcamp%5Etweetembed%7Ctwterm%5E1835554339403751877%7Ctwgr%5E9d43a0eb2322dbf1a2118e2fa0b44b0de37bd6a6%7Ctwcon%5Es1_