ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣವೊಂದರಲ್ಲಿ ಏರ್ ಪೋರ್ಟ್ ನಲ್ಲಿ ಆರೋಪಿಯೊಬ್ಬ ಪ್ರಯಾಣಿಕನ ಲಗೇಜ್ ಟ್ರಾಲಿಯಲ್ಲಿ ತನ್ನ ಚಿನ್ನದ ಬ್ಯಾಗ್ ಇಟ್ಟು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ದುಬೈನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಗೋಲ್ಡ್ ಸ್ಮಗ್ಲರ್ ಒಬ್ಬ, ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಯಾಣಿಕರೊಬ್ಬರ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬ್ಯಾಗ್ ಇಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಾನು ಸಿಕ್ಕಿ ಬೀಳುತ್ತೇನೆ ಎಂಭ ಭಯದಿಂದಲ್ಲಿ ಆರೋಪಿ, ತನ್ನ ಸಹಪ್ರಯಾಣಿಕನ ಲಗೇಜ್ ಟ್ರಾಲಿಗೆ ತನ್ನ ಚಿನ್ನದ ಬ್ಯಾಗ್ ಇಟ್ಟು ನಾಪತ್ತೆಯಾಗಿದ್ದಾನೆ. ಬರೋಬ್ಬರಿ 3.5ಕೆಜಿ ಚಿನ್ನದ ಬಿಸ್ಕೆಟ್ ಗಳು ಪತ್ತೆಯಾಗಿವೆ.
ಪ್ರಯಾಣಿಕ ತನ್ನ ಟ್ರಾಲಿ ತಳ್ಳಿಕೊಂಡು ಬರುತ್ತಿದದಗ ಟ್ರಾಲಿ ಬ್ಯಾಗ್ ನಿಂದ ಚಿನ್ನ ಹೊರಗಡೆ ಬಿದ್ದಿದೆ. ಇದನ್ನು ಕಂಡು ತಬ್ಬಿಬ್ಬಾದ ಪ್ರಯಾಣಿಕ ತಕ್ಷಣ ಚಿನ್ನದ ಬ್ಯಾಗ್ ಸಮೇತ ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬ್ಯಾಗ್ ನಲ್ಲಿ 3.5 ಕೆಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ.