ನವದೆಹಲಿ: ಜಾಗತಿಕ ಬೇಡಿಕೆ ಕುಸಿತವಾಗಿದ್ದರಿಂದ ಚಿನ್ನದ ಬೆಲೆ 1800 ರೂ.ನಷ್ಟು ಇಳಿಕೆಯಾಗಿದ್ದು, ಅಪರಂಜಿ ಚಿನ್ನದ ದರ 10 ಗ್ರಾಂಗೆ 95,050 ರೂ.ಗೆ ಮಾರಾಟವಾಗಿದೆ.
ಅಖಿಲ ಭಾರತ ಸರಾಫ್ ಒಕ್ಕೂಟ ಈ ಬಗ್ಗೆ ಮಾಹಿತಿ ನೀಡಿದ್ದು, ಬುಧವಾರ ಶೇಕಡ 99.9ರಷ್ಟು ಶುದ್ಧತೆ ಚಿನ್ನ ಮತ್ತು ಶೇಕಡ 99.5 ರಷ್ಟು ಶುದ್ಧತೆ 10 ಗ್ರಾಂ ಚಿನ್ನದ ದರ ಕ್ರಮವಾಗಿ 96,850 ರೂ., 96,400 ರೂಪಾಯಿ ಇತ್ತು. ಚೀನಾ ಮತ್ತು ಅಮೆರಿಕ ನಡುವಿನ ಸುಂಕ ಸಮರಕ್ಕೆ ವಿರಾಮ ನೀಡಿದ ಬೆನ್ನಲ್ಲೇ ಹೂಡಿಕೆದಾರರು ಬೇರೆ ಕಡೆ ಮುಖ ಮಾಡಿರುವುದರಿಂದ ಚಿನ್ನದ ಬೇಡಿಕೆ ಕುಸಿತವಾಗಿದೆ.
ಗುರುವಾರ ಅಪರಂಜಿ ಚಿನ್ನದ ದರ 10 ಗ್ರಾಂ ಗೆ 1800 ರೂಪಾಯಿ ಇಳಿಕೆಯಾಗಿದ್ದು, 95,050 ರೂ.ಗೆ ತಲುಪಿದೆ. ಬೆಳ್ಳಿಯ ದರ ಕೆಜಿಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ಬುಧವಾರ 98,000 ರೂ. ಇದ್ದ ಒಂದು ಕೆಜಿ ಬೆಳ್ಳಿ ದರ ಗುರುವಾರ 97,000 ರೂ.ಗೆ ಇಳಿಕೆಯಾಗಿದೆ.