ನವದೆಹಲಿ: ಗುರುವಾರ ಚಿನ್ನದ ದರ ಒಂದೇ ದಿನ 10 ಗ್ರಾಂ ಗೆ 3600 ರೂ. ಏರಿಕೆಯಾಗಿದೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ದತೆಯ ಚಿನ್ನದ ದರ 1,06,100 ರೂಪಾಯಿಗೆ ತಲುಪಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇಕಡ 50ರಷ್ಟು ತೆರಿಗೆ ಹೇರಿದ್ದು ಮತ್ತು ಅದರ ಪರಿಣಾಮಗಳ ಭೀತಿಯಿಂದಾಗಿ ಹೂಡಿಕೆದಾರರು ಷೇರುಪೇಟೆ ಬದಲಾಗಿ ಚಿನ್ನದತ್ತ ಮುಖ ಮಾಡಿದ್ದಾರೆ. ಇದು ದಿಧೀರ್ ಬೆಳೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ. ಇದು ದೇಶದ ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಗುರುವಾರ 3,600 ರೂ. ಏರಿಕೆಯಾಗಿದ್ದು 1,02,200 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 1500 ರೂ. ಏರಿಕೆಯಾಗಿದ್ದು 1,14,000 ರೂ.ಗೆ ಮಾರಾಟವಾಗಿದೆ. ಬೆಂಗಳೂರಿನ6ಲ್ಲಿ ಒಂದು ಕೆಜಿ ಬೆಳ್ಳಿ ದರ 1,21,500 ರೂ.ಗೆ ತಲುಪಿದೆ. ಮುಂಬೈನಲ್ಲಿ 1,00,300 ರೂ.ಗೆ ಮಾರಾಟವಾಗಿದೆ.