ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ: ಭಾರಿ ಕಡಿಮೆಯಾಯ್ತು ಚಿನ್ನದ ದರ

ನೀವು ಚಿನ್ನಾಭರಣ ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಈ ವಾರ ಪೂರ್ತಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದಲ್ಲದೇ ಬೆಳ್ಳಿ ಕೂಡ 1300 ರೂ.ಗೂ ಹೆಚ್ಚು ಅಗ್ಗವಾಗಿದೆ.

ಚಿನ್ನದ ದರ 2900 ರೂ.ಗಿಂತ ಕಡಿಮೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಅಗ್ಗದ ಚಿನ್ನದ ಆಭರಣಗಳನ್ನು ಖರೀದಿಸಲು ನಿಮಗೆ ಉತ್ತಮ ಅವಕಾಶವಿದೆ.

ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್​​(ಐಬಿಜೆಎ) ವೆಬ್‌ಸೈಟ್ ಪ್ರಕಾರ, ಫೆಬ್ರವರಿ 20 ರಂದು ಚಿನ್ನದ ಬೆಲೆ 10 ಗ್ರಾಂಗೆ 56,578 ರೂ., ಫೆಬ್ರವರಿ 25 ರಂದು ಚಿನ್ನದ ಬೆಲೆ 10 ಗ್ರಾಂಗೆ 55,957 ರೂ. ಮಟ್ಟದಲ್ಲಿತ್ತು, ಆದ್ದರಿಂದ ಈ ಪ್ರಕಾರ, ಇಡೀ ವಾರ ಚಿನ್ನದ ಬೆಲೆಯಲ್ಲಿ 630 ರೂ. ಇಳಿಕೆಯಾಗಿದೆ.

IBJA ಯ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 2 ರಂದು ಚಿನ್ನದ ಬೆಲೆ 10 ಗ್ರಾಂಗೆ 58,882 ರೂ., ಈ ಸಮಯದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,957 ರೂ. ಇದರ ಪ್ರಕಾರ ಈ ಸಮಯದಲ್ಲಿ ಚಿನ್ನ 2925 ರೂ.ಗಳಷ್ಟು ಅಗ್ಗವಾಗುತ್ತಿದೆ.

ಫೆಬ್ರವರಿ 20 ರಂದು ಬೆಳ್ಳಿಯ ಬೆಲೆ ಕೆಜಿಗೆ 65,712 ರೂ., ಫೆ.25ರಂದು ಬೆಳ್ಳಿಯ ಬೆಲೆ ಕೆ.ಜಿ.ಗೆ 64,331 ರೂ. ಇದ್ದು,  ಈ ಪ್ರಕಾರ ಬೆಳ್ಳಿ ಬೆಲೆಯಲ್ಲಿ 1,381 ರೂ. ಇಳಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read