‘ಸ್ವರ್ಣ ಬಂಧು ಯೋಜನೆ’ ಜಾರಿ: ಮನೆ ಬಾಗಿಲಿಗೆ ಗೋಲ್ಡ್ ಲೋನ್: ಆಕರ್ಷಕ ಬಡ್ಡಿ, ಡಿಜಿಟಲ್ ವ್ಯವಸ್ಥೆಯೊಂದಿಗೆ ಕರ್ನಾಟಕ ಬ್ಯಾಂಕ್ ಸೌಲಭ್ಯ

ಮಂಗಳೂರು: ಗ್ರಾಹಕರ ಅನುಕೂಲಕ್ಕಾಗಿ ಕರ್ನಾಟಕ ಬ್ಯಾಂಕ್ ಮನೆ ಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯವನ್ನು ವಿಸ್ತರಿಸಿದೆ.

ಆಕರ್ಷಕ ಬಡ್ಡಿ ದರ, ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ ಕೆಬಿಎಲ್ ಸ್ವರ್ಣ ಬಂಧು ಹೆಸರಲ್ಲಿ ಯೋಜನೆ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಆಯ್ದ ಶಾಖೆಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಬ್ಯಾಂಕ್ ನ ಎಲ್ಲಾ ಶಾಖೆಗಳಿಂದಲೂ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗುವುದು.

ಮಣಿಪಾಲ್ ಗ್ರೂಪ್ ಕಂಪನಿ ಬೆಂಬಲಿತ ಸಹಿ ಬಂಧು ಎನ್ನುವ ಗೋಲ್ಡ್ ವ್ಯವಹಾರ ಸಂಸ್ಥೆ ಸಹಭಾಗಿತ್ವದೊಂದಿಗೆ ಕೆಬಿಎಲ್ ಸ್ವರ್ಣ ಬಂಧು ಯೋಜನೆ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಲಿದೆ. ಹೆಚ್ಚಿನ ಗ್ರಾಹಕರಿಗೆ ಗೋಲ್ಡ್ ಲೋನ್ ಸೌಲಭ್ಯ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಗ್ರಾಹಕರು ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹೆಚ್. ಶ್ರೀಕೃಷ್ಣನ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read