BREAKING: ಪ್ರತಿಷ್ಠಿತ ಸಾಯಿ ಗೋಲ್ಡ್ ಪ್ಯಾಲೇಸ್ ಚಿನ್ನಾಭರಣ ಕಳವು

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಶರವಣ ಅವರ ಬೆಂಗಳೂರಿನ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಚಿನ್ನ ಕಳವು ಮಾಡಲಾಗಿದೆ.

ಶರವಣ ಮಾಲಿಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಿಂದ ಹಾಲ್ ಮಾರ್ಕ್ ಹಾಕಲು ನೀಡಿದ್ದ ಚಿನ್ನಾಭರಣ ಕಳವಾಗಿದ್ದು, ಬಸವನಗುಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ನಗರ್ತಪಠೆಯ ಕೋನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್ ಗೆ 1ಕೆಜಿ 249 ಗ್ರಾಂ ಚಿನ್ನದ ಆಭರಣಗಳನ್ನು ಕೊಟ್ಟಿದ್ದರು.

ಮ್ಯಾನೇಜರ್ ಭೀಮರಾಜು ಚಿನ್ನಾಭರಣ ಕೊಟ್ಟಿದ್ದು, ಹಾಲ್ಮಾರ್ಕ್ ಸೆಂಟರ್ ಮಾಲಿಕ ಭರತ್ ಚಟಡ್ ವಿರುದ್ಧ ದೂರು ನೀಡಲಾಗಿದೆ. ನಮ್ಮ ಕೆಲಸಗಾರ ಕಳ್ಳತನ ಮಾಡಿದ್ದಾನೆ ಎಂದು ಭರತ್ ಹೇಳುತ್ತಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read