VIDEO | ಶಾಲೆಯಲ್ಲೇ ಗಡದ್ದಾಗಿ ನಿದ್ರೆಗೆ ಜಾರಿದ ಶಿಕ್ಷಕಿ; ಗಾಳಿ ಬೀಸಿದ ಮಕ್ಕಳು

 

ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಶಿಕ್ಷಕರ ವಿಡಿಯೋ ವೈರಲ್‌ ಆಗಿದೆ. ಇಲ್ಲಿನ ಅಲಿಗಢ್‌ನ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರು ತರಗತಿಯಲ್ಲಿ ಮಲಗಿ ನಿದ್ರೆ ಮಾಡ್ತಿದ್ದಾರೆ. ವಿದ್ಯಾರ್ಥಿನಿ ಪುಸ್ತಕದ ಸಹಾಯದಿಂದ ಪ್ರಾಂಶುಪಾಲರಿಗೆ ಗಾಳಿ ಬೀಸುತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋ ವೈರಲ್‌ ಆಗ್ತಿದ್ದಂತೆ ಶಿಕ್ಷಕಿ ಡಿಂಪಲ್ ಬನ್ಸಾಲ್ ಅವರನ್ನು ಅಮಾನತು ಮಾಡಲಾಗಿದೆ. ಅಲಿಘರ್‌ನ ಧನಿಪುರ ಪ್ರದೇಶದ ಗೋಕುಲ್‌ಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ತರಗತಿಯಲ್ಲೇ ನೆಲದ ಮೇಲೆ ಹಾಯಾಗಿ ಮಲಗಿದ್ದಾರೆ.

ಇದೇ ವೇಳೆ ಅದೇ ಶಿಕ್ಷಕಿ ವಿದ್ಯಾರ್ಥಿಗಳನ್ನು ಥಳಿಸುವ ಮತ್ತೊಂದು ವಿಡಿಯೋ ಕೂಡ ಹೊರಬಿದ್ದಿದೆ. ಈ ಎರಡೂ ವಿಡಿಯೋವನ್ನು ಪರಿಶೀಲಿಸಿ ಕ್ರಮತೆಗೆದುಕೊಳ್ಳಲಾಗಿದೆ. ಶಿಕ್ಷಕಿ ಹೊಡೆಯುತ್ತಿರುವ ವಿಡಿಯೋ ಹಳೆಯದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

The teacher has been suspended after the video went viral.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read