‘ಬಟ್ಟೆ ಬಿಚ್ಚಿ ದೇವಸ್ಥಾನದ ಒಳಗೆ ಹೋಗುವುದು ದೇವರಿಗೆ ಮಾಡುವ ಅವಮಾನ’ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ದೇವರಿಗೆ ಮಾಡುವ ಅವಮಾನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ನನಗೆ ಒಂದು ಸಲ ದೇವಸ್ಥಾನಕ್ಕೆ ಬಟ್ಟೆ ಬಿಚ್ಚಿ ಬನ್ನಿ ಎಂದು ಹೇಳಿದ್ರು, ಆದರೆ ನಾನು ಬಟ್ಟೆ ಬಿಚ್ಚಿ ದೇವಸ್ಥಾನ ಪ್ರವೇಶಿಸುವುದು ಅವಮಾನ ಎಂದು ದೇವಸ್ಥಾನದ ಒಳಗೆ ಹೋಗಿಲ್ಲ. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಬೇಡಿ, ನೀವೇ ನಿಮ್ಮ ದೇವರುಗಳಿಗೆ ದೇವಾಲಯ ಕಟ್ಟಿ ಪೂಜೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ಮತ್ತೊಂದು ಹೊಸ ಚರ್ಚೆಗೆ ಕಾರಣವಾಗಿದೆ.

ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ, ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಮಾಡುವುದು ಅವಮಾನ. ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ ಶಕ್ತಿಗಳು ನಾರಾಯಣಗುರು ಕಾಲದಲ್ಲೂ ಇತ್ತು, ನಂತರ ನಾರಾಯಣ ಗುರು ಕೆಲವು ಬದಲಾವಣೆಗಳನ್ನು ತಂದರು ಎಂದು ಸಿಎಂ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read