BREAKING : ‘ಕ್ರೌರ್ಯ’ ಮಾಡೋಕೆ ನಟ ದರ್ಶನ್ ಗೆ ಬುದ್ದಿ ಕೊಟ್ಟಿದ್ದೇ ದೇವರು : ನಟಿ ಗಿರಿಜಾ ಲೋಕೇಶ್..!

ಬೆಂಗಳೂರು : ನಟ ದರ್ಶನ್ ಗಾಗಿ ಪೂಜೆ ಯಾಕೆ ಮಾಡಬಾರದು..? ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬರಲು ಅವನು ಕೂಡ ಬಹಳ ಕಷ್ಟಪಪಟ್ಟಿದ್ದಾನೆ ಎಂದು ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ.

ನಟ ದರ್ಶನ್ ಬಿಡುಗಡೆ ಹಾಗೂ ಸ್ಯಾಂಡಲ್ ವುಡ್ ಒಳಿತಿಗಾಗಿ ಹೋಮ ಹವನ ನಡೆಸುತ್ತಿರುವ ವಿಚಾರಕ್ಕೆ ಹಿರಿಯ ನಟಿ ಗಿರಿಜಾ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಟ ದರ್ಶನ್ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರು, ನಟ ದರ್ಶನ್ ಕನ್ನಡ ಚಿತ್ರರಂಗದ ಅಭಿವೃದ್ದಿಗೆ ಬಹಳ ಕಷ್ಟಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆತನದ್ದೂ ಪಾಲೂ ಇದೆ. ತಾಯಿ ಮಗನಿಗೆ ಒಳ್ಳೆದು ಮಾಡಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ. ‘ಕ್ರೌರ್ಯ’ ಮಾಡೋಕೆ ದರ್ಶನ್ ಗೆ ಬುದ್ದಿ ಕೊಟ್ಟಿದ್ದೇ ದೇವರು , ಅದಕ್ಕೆ ನಾವು ಈಗ ದೇವರ ಮೊರೆ ಹೋಗಿದ್ದೇವೆ..! ಅದರಲ್ಲಿ ತಪ್ಪೇನಿದೆ..? ದರ್ಶನ್ ಗಾಗಿ ಪೂಜೆ ಯಾಕೆ ಮಾಡಬಾರದು..? ಎಂದು ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read