ಸಮುದ್ರತೀರದಲ್ಲಿ ಪತ್ನಿ ಮುಳುಗಿಸಿ ಕೊಂದು ಆಕಸ್ಮಿಕ ಎಂದು ಬಿಂಬಿಸಿದ ಐಷಾರಾಮಿ ಹೋಟೆಲ್ ಮ್ಯಾನೇಜರ್ ಅರೆಸ್ಟ್

ಪಣಜಿ: ಶುಕ್ರವಾರ ದಕ್ಷಿಣ ಗೋವಾದ ಬೀಚ್‌ನಲ್ಲಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಐಷಾರಾಮಿ ಹೋಟೆಲ್‌ ನ ಮ್ಯಾನೇಜರ್‌ ನನ್ನು ಬಂಧಿಸಲಾಗಿದೆ.

29ರ ಹರೆಯದ ಯುವಕ ಪತ್ನಿಯನ್ನು ಹತ್ಯೆಗೈದ ಬಳಿಕ ಅದನ್ನು ಆಕಸ್ಮಿಕ ಘಟನೆ ಎಂದು ಬಿಂಬಿಸಲು ಯತ್ನಿಸಿದ್ದು, ಆ ಪ್ರದೇಶದಲ್ಲಿ ಐಸ್‌ಕ್ರೀಂ ಖರೀದಿಸುತ್ತಿದ್ದಾಗ ಪತ್ನಿ ನೀರಿನಲ್ಲಿ ಮುಳುಗಿದ್ದಾಳೆ ಎಂದು ತಿಳಿಸಿದ್ದಾನೆ.

ಮೃತರನ್ನು ಲಕ್ನೋದ ಶಾರದಾ ನಗರದ ಮೂಲದ ದೀಕ್ಷಾ ಗಂಗವಾರ್(27) ಎಂದು ಪೊಲೀಸರು ಗುರುತಿಸಿದ್ದಾರೆ. ಆಕೆಯ ಪತಿ, ಲಕ್ನೋ ಮೂಲದ ಗೌರವ್ ಕಟಿಯಾರ್ ದಕ್ಷಿಣ ಗೋವಾದ ಕೊಲ್ವಾದಲ್ಲಿ ಮ್ಯಾರಿಯಟ್ ಇಂಟರ್‌ನ್ಯಾಶನಲ್ ನಿರ್ವಹಿಸುತ್ತಿರುವ ಐಷಾರಾಮಿ ಹೋಟೆಲ್‌ನಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ಆಗಿದ್ದಾರೆ. ಕಳೆದ 7 ವರ್ಷಗಳಿಂದ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಬಹುದಾದರೂ, ಕಟಿಯಾರ್ ಅವರು ವಿವಾಹೇತರ ಸಂಬಂಧ ಹೊಂದಿದ್ದರಿಂದ ವರ್ಷದ ಹಿಂದೆ ವಿವಾಹವಾದ ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಪೊಲೀಸರ ಪ್ರಕಾರ, ಶುಕ್ರವಾರ ಮಧ್ಯಾಹ್ನ 3.45 ರ ಸುಮಾರಿಗೆ ದಂಪತಿಗಳು ದಕ್ಷಿಣ ಗೋವಾದ ಕಾಬೋ-ಡಿ-ರಾಮದಲ್ಲಿರುವ ರಾಜ್‌ಬಾಗ್ ಬೀಚ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಆರೋಪಿಯು ನೀರಿನಲ್ಲಿ ಮುಳುಗಿಸು ಮೊದಲು ತನ್ನ ಹೆಂಡತಿಯನ್ನು ಸಮುದ್ರತೀರದಲ್ಲಿ ಕಲ್ಲಿನ ಪ್ರದೇಶಕ್ಕೆ ಕರೆದೊಯ್ದು ಜಗಳವಾಡಿ ನಂತರ, ಸಮುದ್ರತೀರದಲ್ಲಿ ಮುಳುಗಿಸಿದ್ದಾನೆ. ಬಳಿಕ ತಾನು ಐಸ್‌ಕ್ರೀಂ ಖರೀದಿಸಲು ತೆರಳಿದ್ದ ವೇಳೆ ಪತ್ನಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read