ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಖಾಸಗಿ ಜಾಯ್‌ರೈಡ್ ಗ್ಲೈಡರ್ ವಿಮಾನವು ವಸತಿ ಗೃಹಕ್ಕೆ ಅಪ್ಪಳಿಸಿದೆ. ವಿಮಾನ ಅಪಘಾತದಲ್ಲಿ ಪೈಲಟ್ ಮತ್ತು 14 ವರ್ಷದ ಪ್ರಯಾಣಿಕ ಗಾಯಗೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ತಾಂತ್ರಿಕ ದೋಷವು ಸಣ್ಣ ವಿಮಾನದ ಹಾರಾಟಕ್ಕೆ ಅಡ್ಡಿಪಡಿಸಿದ ನಂತರ ವಿಮಾನವು ಅಪಘಾತಕ್ಕೀಡಾಗಿದೆ ಎಂದು ವರದಿಗಳು ಸೂಚಿಸುತ್ತಿವೆ.
ಆದಾಗ್ಯೂ ಘಟನೆಗೆ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ತನಿಖೆಯ ನಂತರವೇ ನಿಖರ ಕಾರಣ ಗೊತ್ತಾಗಲಿದೆ.
ವಿಮಾನವು ಧನ್‌ಬಾದ್‌ನ ಬಾವಡ್ಡಾ ಏರ್‌ಸ್ಟ್ರಿಪ್‌ನಿಂದ ಹೊರಟು ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ವಸತಿ ಕಟ್ಟಡಕ್ಕೆ ಅಪ್ಪಳಿಸುವ ಮುನ್ನ ಅಪಘಾತದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವವರನ್ನು ಬಿಹಾರದ ಪಾಟ್ನಾ ಮೂಲದ ಕುಶ್ ಸಿಂಗ್ ಎಂದು ಗುರುತಿಸಲಾಗಿದೆ. ಬಾರ್ವಡ್ಡಾ ವಿಮಾನ ನಿಲ್ದಾಣದಿಂದ ಖಾಸಗಿ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಗ್ಲೈಡರ್‌ನಲ್ಲಿ ಬಾಲಕ ಜಾಯ್‌ರೈಡ್ ತೆಗೆದುಕೊಂಡಿದ್ದ. ಜಾಯ್‌ರೈಡ್ ಗ್ಲೈಡರ್‌ನಲ್ಲಿ ಚಾಲಕನ ಜೊತೆಗೆ ಓರ್ವ ಪ್ರಯಾಣಿಕ ಮಾತ್ರ ಸವಾರಿ ಮಾಡಬಹುದು.
https://twitter.com/IndiatvRishi/status/1639084629079785474?ref_src=twsrc%5Etfw%7Ctwcamp%5Etweetembed%7Ctwterm%5E1639084629079785474%7Ctwgr%5E6093a295e1fd7b1f06140a363d7d242c383803e0%7Ctwcon%5Es1_&ref_url=https%3A%2F%2Fzeenews.india.com%2Faviation%2Fglider-plane-crashes-into-house-soon-after-take-off-in-jharkhands-dhanbad-video-surfaces-2587342.html