ಒಂದು ಕಡೆ ಉಚಿತ ಕೊಡುಗೆ, ಇನ್ನೊಂದು ಕಡೆ ಸುಲಿಗೆ : ರಾಜ್ಯ ಸರ್ಕಾರದ ವಿರುದ್ಧ ‘ಜೆಡಿಎಸ್’ ವಾಗ್ದಾಳಿ

ಬೆಂಗಳೂರು : ಒಂದು ಕಡೆ ಉಚಿತ ಕೊಡುಗೆ ಕೊಟ್ಟು ಇನ್ನೊಂದು ಕಡೆ ಸರ್ಕಾರ ಸುಲಿಗೆ ಮಾಡುತ್ತಿದೆ : ಎಂದು ಜೆಡಿಎಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ,ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ.ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ.ಇದು ಸರಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ! ಎಂದು ಜೆಡಿಎಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ ಸರಕಾರ ಕೊಡುತ್ತಿರುವ ವರ್ಗಾವಣೆ ‘ ಸಂಕಷ್ಟಭಾಗ್ಯ ‘ ವರ್ಣಿಸದಸಳ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ದಿಯ ಹೊಸ ಭರವಸೆ, ಹೊಸ ಕನಸು ಎಂಬುದು ನನಗೆ ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ?

ಈ ಸರಕಾರ ಬಂದು ಎರಡು ತಿಂಗಳೂ ಕಳೆದಿಲ್ಲ. ಆಗಲೇ ಕಾಸಿಗಾಗಿ ಹುದ್ದೆ ಬಿಸ್ನೆಸ್ ಪರಾಕಾಷ್ಠೆ ಮುಟ್ಟಿದ್ದು, ಇವರು ವರ್ಗಾವಣೆ ಅಂಕದಲ್ಲಿ ‘ ಪರಕಾಯ ಪ್ರವೇಶ ‘ ಮಾಡಿದ್ದಾರೆ. ಗ್ಯಾರಂಟಿ, ಭಾಗ್ಯಗಳ ಮೂಲಕ ಜನರನ್ನು ಯಾಮಾರಿಸಿ ಇವರು ಹುಂಡಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ.ಇದೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ ಮಾಡಿ ಪ್ರಚಾರ ಮಾಡಿತ್ತು. ಈಗ ಕೈ ಸರಕಾರದ ರೇಟ್ ಕಾರ್ಡ್ ಎಲ್ಲರ ಕೈಗಳಲ್ಲೂ ನಲಿದು ನರ್ತಿಸುತ್ತಿದೆ. ಸರಕಾರದ ‘ ಅಧಿಕೃತ ಅರ್ಥನೀತಿ ‘ ಆಗಿದೆ ಹನಿಮೂನ್ ಪೀರಿಯಡ್ ಹೊತ್ತಿನಲ್ಲೇ ಹೀಗಾದರೆ ಫುಲ್ ಮೂನ್ ಸಮಯದಲ್ಲಿ ಇದು ಇನ್ನಾವ ಹಂತಕ್ಕೆ ಹೋಗಲಿದೆ ಎನ್ನುವ ಊಹೆ ಜನರಿಗೇ ಬಿಟ್ಟಿದ್ದು. ಇಂಥ ಕಮಿಷನ್’ಗೇಡಿ ಸರಕಾರದ ಬಗ್ಗೆ ಸರಕಾರಿ ನೌಕರರು, ಅಧಿಕಾರಿಗಳು ಆತಂಕಗೊಂಡಿದ್ದಾರೆ. ಜನರಲ್ಲೂ ಆಕ್ರೋಶ ಮಡುಗಟ್ಟಿದೆ ಎಂದು ಜೆಡಿಎಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

https://twitter.com/JanataDal_S/status/1679390396546428928?ref_src=twsrc%5Etfw%7Ctwcamp%5Etweetembed%7Ctwterm%5E1679390396546428928%7Ctwgr%5E3fb8099709722797d2452011cdb31fa658453fcf%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fbengaluru%2Fkarnataka-breaking-today-kannada-news-live-updates-on-karnataka-weather-monsoon-congress-government-siddaramaiah-and-dk-shivakumar-karnataka-assembly-sesion-hd-kumaraswamy-ayb-621638.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read