ʼಸಂಗಾತಿʼಯನ್ನು ತುಂಬ ಪ್ರೀತಿಸ್ತಾರೆ ಈ ಹೆಸರಿನ ಹುಡುಗಿಯರು

ಸಾಮಾನ್ಯವಾಗಿ ಜಾತಕಕ್ಕೂ ಹೆಸರಿಗೂ ಸಂಬಂಧವಿರುತ್ತದೆ. ಜಾತಕ ನೋಡಿ ಅದಕ್ಕೆ ಹೊಂದಿಕೆಯಾಗುವ ಅಕ್ಷರದಿಂದ ಬರುವ ಹೆಸರನ್ನು ಇಡಲಾಗುತ್ತದೆ. ಸಂಗಾತಿ ಪ್ರೀತಿ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ.

ಕೆಲವರಿಗೆ ಸಾಗರದಷ್ಟು ಪ್ರೀತಿ ಸಿಕ್ಕಿದ್ರೆ ಮತ್ತೆ ಕೆಲವರಿಗೆ ನೋವು, ನಿರಾಶೆ ಕಾದಿರುತ್ತದೆ. ಯಾವ ಹೆಸರಿನ ಹುಡುಗಿಯರು ಹೆಚ್ಚು ಪ್ರೀತಿ ನೀಡ್ತಾರೆ ಎಂಬುದನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ.

ʼಪಿʼ ಹೆಸರಿನ ಹುಡುಗಿಯರು ಪ್ರೀತಿಯಲ್ಲಿ ಬೀಳುವುದು ಅಪರೂಪ. ಆಲೋಚನೆ ಮಾಡಿ ಅವ್ರು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ತಾರೆ. ಪ್ರೀತಿಗೆ ಬಿದ್ದ ಮೇಲೆ ಮುಗೀತು. ಅವ್ರನ್ನು ಜೀವಕ್ಕೆ ಜೀವ ನೀಡುವಷ್ಟು ಪ್ರೀತಿ ಮಾಡ್ತಾರೆ.

ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ. ಸಂಗಾತಿ ಬಗ್ಗೆ ಗಂಭೀರವಾಗಿರುವ ಹುಡುಗಿಯರು ಧೈರ್ಯಶಾಲಿಗಳಾಗಿರುತ್ತಾರೆ. ವೃತ್ತಿ ಹಾಗೂ ಪ್ರೀತಿ ಎರಡು ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ. ಸಂಗಾತಿಗೆ ನಿಷ್ಠರಾಗಿರುವ ಅವ್ರು ಸಂಗಾತಿ ಹೇಳಿದ ಪ್ರತಿಯೊಂದನ್ನೂ ಕೇಳುತ್ತಾರೆ.

ʼಎಸ್ʼ ಹೆಸರಿನ ಹುಡುಗಿಯರ ಮೂಗಿನ ಮೇಲೆ ಕೋಪವಿರುತ್ತದೆ. ಅವ್ರು ಸಂಬಂಧ ಉಳಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದ್ರೂ ಹೋಗಬಲ್ಲರು. ಈ ಹೆಸರಿನ ಹುಡುಗಿಯರು ತುಂಬಾ ಸುಂದರವಾಗಿರುವ ಕಾರಣ ಹುಡುಗ್ರು ಸುಲಭವಾಗಿ ಆಕರ್ಷಿತರಾಗ್ತಾರೆ. ಒಮ್ಮೆ ಒಬ್ಬನ ಕೈ ಹಿಡಿದ್ರೆ ಮತ್ತೆ ಬೇರೆಯವರನ್ನು ಈ ಹುಡುಗಿಯರು ನೋಡುವುದಿಲ್ಲ. ಪ್ರೀತಿಸಿದ ಹುಡುಗನ ಜೊತೆ ಜೀವನ ಕಳೆಯಲು ಇವರು ಬಯಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read