ಭಾಗ್ಯಶಾಲಿಯಾಗಿರ್ತಾರೆ ಈ ದಿನಾಂಕದಂದು ಜನಿಸಿದ ʼಹುಡುಗಿʼಯರು

ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ ಹುಡುಗಿಯರ ಅದೃಷ್ಟ, ದುರಾದೃಷ್ಟದ ಬಗ್ಗೆ ವಿವರಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ. ಈ ದಿನ ಗ್ರಹದಲ್ಲಿ ಬದಲಾವಣೆಯಾಗುತ್ತದೆ.

ಈ ದಿನ ಹುಟ್ಟಿದ ಹುಡುಗಿಯರು ಸುಲಭವಾಗಿ ಯಶಸ್ಸು ಗಳಿಸ್ತಾರೆ. ಸಾಧನೆ ಶಿಖರಕ್ಕೇರುತ್ತಾರೆ. ಸುಖ-ಸಮೃದ್ಧಿ ನೆಲೆಸಿರುತ್ತದೆ. ಎಲ್ಲ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಹೋದಲ್ಲೆಲ್ಲ ಸಂತೋಷ ಮನೆ ಮಾಡಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 10 ನೇ ತಾರೀಕಿನಂದು ಹುಟ್ಟಿದ ಮಹಿಳೆ ಕೂಡ ಅದೃಷ್ಟವಂತಳು. ಆಕೆ ಭವಿಷ್ಯ ಉಜ್ವಲವಾಗಿರುತ್ತದೆ. ಎಲ್ಲ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಾಗೆ 15 ನೇ ತಾರೀಕಿನಂದು ಜನಿಸಿದ ಹುಡುಗಿ ಕೂಡ ಅದೃಷ್ಟವಂತಳಂತೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವ ಹುಡುಗಿ ಕೈನಲ್ಲಿ ಸಂತೋಷ, ಸಂಪತ್ತು ಭದ್ರವಾಗಿರುತ್ತದೆಯಂತೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read