ಗಂಡನ ‘ಗರ್ಲ್ ಫ್ರೆಂಡ್’ ಸಂಬಂಧಿಯಲ್ಲ : ಬಾಂಬೆ ಹೈಕೋರ್ಟ್ ನಿಂದ ಮಹತ್ವದ ಹೇಳಿಕೆ

ಪತಿಯ ಗರ್ಲ್‌ ಫ್ರೆಂಡ್‌ ಸಂಬಂಧಿಯಲ್ಲ ಎಂದು ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಬಾಂಬೆ ಹೈಕೋರ್ಟ್‌ ನಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಗರ್ಲ್‌ ಫ್ರೆಂಡ್‌ ವಿರುದ್ಧ ದೂರು ನೀಡಿದ್ದಳು. ಮಹಿಳೆ ತನ್ನ ಪತಿ ಹಾಗೂ ಸಂಬಂಧಿ ಕೌಟುಂಬಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಳು. ಆದ್ರೆ ಪತಿಯ ಗರ್ಲ್‌ ಫ್ರೆಂಡ್‌ ಸಂಬಂಧಿಯಾಗಲು ಸಾಧ್ಯವಿಲ್ಲ. ಹಾಗಾಗಿ ಸೆಕ್ಷನ್‌ 498A ಅಡಿಯಲ್ಲಿ ಆಕೆ ಅಪರಾಧಿಯಾಗೋದಿಲ್ಲ ಎಂದು ಕೋರ್ಟ್‌ ಹೇಳಿದೆ.

ಕೌಟುಂಬಿಕ ಕಿರುಕುಳ ಆರೋಪದಡಿ ಪತಿಗೆ ಮೂರು ವರ್ಷ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ. ಆದ್ರೆ ಪತಿಯ ಗರ್ಲ್‌ ಫ್ರೆಂಡ್‌, ಸಂಬಂಧಿಯಲ್ಲದ ಕಾರಣ ಆಕೆಯನ್ನು ಪ್ರಕರಣದಿಂದ ಹೊರಗಿಡಬೇಕಾಗುತ್ತದೆ ಎಂದು ವಿಭಾ ಕಂಕಣವಾಡಿ ಮತ್ತು ವೃಶಾಲಿ ಜೋಶಿ ನೇತೃತ್ವದ ನ್ಯಾಯಾಲಯದ ವಿಭಾಗೀಯ ಪೀಠ ಹೇಳಿದೆ.

ಪತಿಯ ಗರ್ಲ್‌ ಫ್ರೆಂಡ್‌ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ ಕಾನೂನುಬಾಹಿರವಾಗಿದೆ ಏಕೆಂದರೆ ಇದು ಶಾಸನಬದ್ಧ ವ್ಯಾಖ್ಯಾನವನ್ನು ಆಧರಿಸಿಲ್ಲ ಎಂದಿದೆ. ಆದ್ರೆ ವಿವಾಹೇತರ ಸಂಬಂಧದ ಆರೋಪವನ್ನು ಆಧರಿಸಿದೆ ಎಂದು ಕೋರ್ಟ್‌ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read