ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು ಮುಖ್ಯವಾದ ಅಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಾರೆ. ಪರಿಣಾಮವಾಗಿ, ಅವರು ಭಯಾನಕ ಫಲಿತಾಂಶ ಎದುರಿಸುತ್ತಾರೆ. ಕೆಲವೊಮ್ಮೆ ಎಷ್ಟೇ ಕೌಶಲ ಇದ್ದರೂ ಗ್ರಹಚಾರ ಕೆಟ್ಟಾಗ ವಿಪತ್ತು ಎದುರಾಗುತ್ತದೆ.
ಅಂಥದ್ದೇ ವಿಡಿಯೋ ಈಗ ವೈರಲ್ ಆಗಿದೆ. ಭಾರವಾದ ಬೈಕಿನ ಮೇಲೆ ಸವಾರಿ ಮಾಡುವುದು ಕೆಲವರಿಗೆ ಸುಲಭವಾದರೂ ಹೆಣ್ಣುಮಕ್ಕಳ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಎಚ್ಚರಿಕೆ ಇರಬೇಕಾಗುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚಿಗೆ ಪರಿಣತಿ ಮತ್ತು ಜವಾಬ್ದಾರಿಯ ಪ್ರಜ್ಞೆಯೂ ಅಗತ್ಯವಿರುತ್ತದೆ. ಆದರೆ ಯುವತಿಯೊಬ್ಬಳಿ ಬೈಕ್ ರೈಡಿಂಗ್ ವೇಳೆ ಸ್ಟೈಲ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ.
ಇದರ ವಿಡಿಯೋ ನೋಡಿ ಜನರು ನಗುವಂತಾಗಿದೆ. ಯುವತಿಯೊಬ್ಬಳು ಭಾರವಾದ ಮೋಟಾರ್‌ಸೈಕಲ್ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಬೈಕ್ ಓಡಿಸುವ ಆಕೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ ಈಕೆ ಸುಮ್ಮನೇ ಇರದೇ ಕ್ಯಾಮೆರಾ ಕಡೆ ಕೈ ಬೀಸುತ್ತಾಳೆ, ನಗುತ್ತಾಳೆ, ಅವಳು ಸವಾರಿಯನ್ನು ಆನಂದಿಸುತ್ತಿದ್ದಾಳೆ ಎಂದು ಸೂಚಿಸುತ್ತಾಳೆ. ಇಷ್ಟೇ ಆದರೂ ಪರವಾಗಿರಲಿಲ್ಲ.
ಆಕೆ ಇನ್ನಷ್ಟು ಇಂಪ್ರೆಸ್ ಮಾಡಲು ಹೋಗಿ ಬೈಕನ್ನು ಅಲುಗಾಡಿಸಲು ಪ್ರಾರಂಭಿಸುತ್ತಾಳೆ. ಆಗಲೇ ಆಗುವುದು ಎಡವಟ್ಟು. ಸ್ವಲ್ಪ ಸಮಯದೊಳಗೆ ತನ್ನ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬೀಳುತ್ತಾಳೆ ಮತ್ತು ಬೈಕು ಕೆಲವು ಅಡಿಗಳಷ್ಟು ಮುಂದೆ ಚಲಿಸುತ್ತದೆ. ಅದೃಷ್ಟವಶಾತ್ ಏನೂ ಅನಾಹುತ ಆಗಲಿಲ್ಲ. ಈ ವಿಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಯುವತಿಗೆ ಬುದ್ಧಿ ಹೇಳಿದ್ದಾರೆ.
https://twitter.com/momentoviral/status/1618638606608003073?ref_src=twsrc%5Etfw%7Ctwcamp%5Etweetembed%7Ctwterm%5E1618638606608003073%7Ctwgr%5Eed2dc0b717971ae553656bcdb504fa85b4ec2f97%7Ctwcon%5Es1_&ref_url=https%3A%2F%2Fwww.india.com%2Fviral%2Fgirl-riding-heavy-motorbike-shakes-it-for-fun-what-happens-next-is-not-less-than-disaster-watch-viral-video-5872118%2F