ದಿನಸಿ ಖರೀದಿಸಲು ಅಂಗಡಿಗೆ ತೆರಳಿದ್ದ ಯುವತಿಯ ಸ್ತನಗಳನ್ನು ಹಿಡಿದ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಕೇರಳದ ತ್ರಿಶೂರ್ ನಲ್ಲಿ ನಡೆದಿರುವ ಘಟನೆಯಲ್ಲಿ ವ್ಯಕ್ತಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಹಗಲುಹೊತ್ತಲ್ಲಿ ಜನನಿಬಿಡ ಮಾರ್ಕೆಟ್ ನಲ್ಲಿ ದಿನಸಿ ಖರೀದಿಸಲೆಂದು ಅಂಗಡಿಗೆ ಬಂದಿದ್ದ ಯುವತಿಯನ್ನ ವ್ಯಕ್ತಿ ಹಿಡಿದು ಅಸಭ್ಯವಾಗಿ ಆಕೆಯ ಸ್ತನಗಳನ್ನು ಹಿಡಿದಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ವ್ಯಕ್ತಿಯನ್ನು ಅಲಿ ಎಂದು ಗುರುತಿಸಲಾಗಿದೆ. ತ್ರಿಶೂರ್ ವೈದ್ಯಕೀಯ ಕಾಲೇಜು ಬಳಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಯುವತಿ ಕೆಲವು ವಸ್ತುಗಳನ್ನು ಖರೀದಿಸಲು ಅಂಗಡಿಗೆ ಬಂದಾಗ ಆಕೆಯ ಸ್ತನಗಳನ್ನು ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಯುವತಿ ಕೆಲ ಯುವತಿಯರೊಂದಿಗೆ ಬಂದು ಆತನಿಗೆ ಬೈಯುತ್ತಾ ನಿಂದಿಸಿದ್ದಾಳೆ. ನಂತರ ಮತ್ತೊಬ್ಬ ಯುವತಿಯ ಸಲಹೆಯಂತೆ ತನ್ನ ಚಪ್ಪಲಿ ಬಿಚ್ಚಿ ಆತನಿಗೆ ಥಳಿಸಿದ್ದಾಳೆ.
ಈ ವೇಳೆ ನಾನು ಪೊಲೀಸ್ ದೂರು ನೀಡುತ್ತೇನೆಂದ ಯುವತಿಗೆ ಕೈಮುಗಿದು ದಯವಿಟ್ಟು ಪೊಲೀಸ್ ದೂರು ನೀಡಬೇಡಿ ಎಂದು ಆರೋಪಿತ ವ್ಯಕ್ತಿ ಕೇಳಿಕೊಂಡಿದ್ದಾನೆ. ಅದಾಗ್ಯೂ ಯುವತಿ ಸಿಟ್ಟಿನಿಂದ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹೊಡೆದು ದೂರು ದಾಖಲಿಸುವುದಾಗಿಯೂ ಹೇಳಿದ್ದಾಳೆ. ಈ ವ್ಯಕ್ತಿ ಬಹುತೇಕ ಎಲ್ಲ ಹುಡುಗಿಯರೊಂದಿಗೆ ಇದೇ ರೀತಿ ವರ್ತಿಸುತ್ತಾನೆ ಎಂದು ಯುವತಿಯರು ಆರೋಪಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.
https://twitter.com/Sarvesh38453373/status/1743142660691640555?ref_src=twsrc%5Etfw%7Ctwcamp%5Etweetembed%7Ctwterm%5E1743142660691640555%7Ctwgr%5E53865fcdb1b21309e58a85358992d8b85f501457%7Ctwcon%5Es1_&ref_url=https%3A%2F%2Fwww.freepressjournal.in%2Findia%2Fvideo-girl-hits-elderly-man-with-slipper-on-his-face-after-he-allegedly-grabs-her-breast-in-keralas-thrissur