ಅಪ್ರಾಪ್ತೆಯ ಜೊತೆ ಯುವಕನಿಗೆ ಪ್ರೀತಿ ಮೂಡಿದ್ದು, ಆಕೆಯನ್ನು ಭೇಟಿಯಾಗಲೆಂದು ಬಂದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಛತ್ತೀಸ್ ಗಢದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ.
16 ವರ್ಷದ ಅಪ್ರಾಪ್ತೆಯ ಮೇಲೆ 21 ವರ್ಷದ ಯುವಕನಿಗೆ ಪ್ರೀತಿಯಾಗಿದೆ. ಆಕೆಯನ್ನು ಭೇಟಿಯಾಗಲೆಂದು ಯುವಕ ಆಕೆಯ ಮನೆ ಬಳಿ ಬಂದಿದ್ದಾನೆ. ಈ ವೇಳೆ ಯುವತಿಯ ಕುಟುಂಬದವರು ಆತನನ್ನು ಹಿಡಿದು, ವಿವಸ್ತ್ರಗೊಳಿಸಿ ಥಳಿಸಿದ್ದಾರೆ.
ಮಲ್ಬರೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವಕನಿಗೆ ಜನರು ಸಾರ್ವಜನಿಕವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನನ್ನು ಕೇಬಲ್, ಪೈಪ್, ಚಪ್ಪಲಿಗಳಿಂದ ಹೊಡೆದಿದ್ದಾರೆ. ಪ್ರಕರಣ ಸಂಬಂಧ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ಯುವಕನನ್ನು ರಾಯಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.