ವಾಶಿಮ್ (ಮಹಾರಾಷ್ಟ್ರ): ಪುಟ್ಟ ಬಾಲಕಿಯೊಬ್ಬಳು 30 ಅಡಿ ಎತ್ತರದಿಂದ ಬಿದ್ದು ಬದುಕುಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಸಿಸಿ ಟಿವಿ ದೃಶ್ಯಾವಳಿಯನ್ನು ಏಪ್ರಿಲ್ 27 ರಂದು ಮಯೂರೇಶ್ ಗಣಪತ್ಯೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಎರಡು ಬೈಕ್‌ಗಳನ್ನು ಸಂಕೀರ್ಣದ ಹೊರಗಿನ ಫುಟ್‌ಪಾತ್‌ನಲ್ಲಿ ನಿಲ್ಲಿಸಲಾಗಿದೆ. ಕೆಲವು ಸೆಕೆಂಡುಗಳ ನಂತರ, ಚಿಕ್ಕ ಹುಡುಗಿ ಎತ್ತರದಿಂದ ಬಿದ್ದದ್ದನ್ನು ನೋಡಬಹುದು.
ಅದೂ ಬೈಕ್ಗೆ ಅಪ್ಪಳಿಸಿ ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ. ಬಿದ್ದ ತಕ್ಷಣ ಏನೂ ಆಗಿಲ್ಲ ಎನ್ನುವಂತೆ ಎದ್ದು ನಿಂತು ಬೈಕ್ ಬಳಿ ಹೋಗಿದ್ದಾಳೆ. ಇದು ಪವಾಡದಲ್ಲಿ ಪವಾಡ ಎನ್ನುವಂತಿದೆ. ಅದೃಷ್ಟ ಚೆನ್ನಾಗಿದ್ದರೆ ಹೇಗೆಲ್ಲಾ ಬದುಕುಳಿಯಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
https://twitter.com/mayuganapatye/status/1651424467258863616?ref_src=twsrc%5Etfw%7Ctwcamp%5Etweetembed%7Ctwterm%5E1651424467258863616%7Ctwgr%5E95b412b29446efc5b79132d530323072d2fb678c%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-girl-falls-from-30-feet-height-in-maharashtras-washim-district-survives-miraculously